ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

Ravi Talawar
ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ
WhatsApp Group Join Now
Telegram Group Join Now
ನೇಸರಗಿ: ಚನ್ನಮ್ಮನ ಕಿತ್ತೂರ ಕ್ಷೇತ್ರದ ಜನಪ್ರೀಯ  ಶಾಸಕರಾದ ಬಾಬಾಸಾಹೇಬ ಪಾಟೀಲರ 52 ನೇ  ಹಾಗೂ ಶಾಸಕರ ಸಹೋದರ ಯುವ ಮುಖಂಡರು,  ನೇಗಿನಹಾಳ ಪಿಕೆಪಿಎಸ್ ಅಧ್ಯಕ್ಷರಾದ ನಾನಾಸಾಹೇಬ ಪಾಟೀಲ ಅವರ  ಜನ್ಮದಿನದ ಪ್ರಯುಕ್ತ ಶಾಸಕರ ಹುಟ್ಟುರಾದ ನೇಗಿನಹಾಳ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಸೋಮವಾರ ದಿನಾಂಕ 22-07-2024 ರಂದು ಬೆಳಿಗ್ಗೆ 9-00 ರಿಂದ 2-00 ಗಂಟೆಯವರೆಗೆ  ಶಾಸಕ ಬಾಬಾಸಾಹೇಬ ಪಾಟೀಲರ ಅಭಿಮಾನಿಗಳ ಬಳಗದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಅಂದು ದಿನಪೂರ್ತಿ ಚನ್ನಮ್ಮನ ಕಿತ್ತೂರು ಕ್ಷೇತ್ರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ 10,000  ಉಚಿತ ನೋಟ ಬುಕ ವಿತ್ತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಿತ್ತೂರು, ಎಂ ಕೆ. ಹುಬ್ಬಳ್ಳಿ, ಕಾದ್ರೊಳ್ಳಿ,  ನೇಸರಗಿ, ಸೋಮನಟ್ಟಿ ಇನ್ನೂ ಅನೇಕ ಪಟ್ಟಣ, ಗ್ರಾಮಗಳ ಶಾಲಾ, ಕಾಲೇಜುಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ತೆರಳಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಬುಕ್  ವಿತರಣೆ ಮಾಡಲಿದ್ದಾರೆ ಎಂದು  ಬಾಬಾಸಾಹೇಬ ಪಾಟೀಲ ಅಭಿಮಾನಿ ಬಳಗದ  ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article