ಬಳ್ಳಾರಿ ಆಗಸ್ಟ್ 22 : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸಮಾಜ ಸೇವಾ ವಿಭಾಗದಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಯೋಗದಲ್ಲಿ ನಗರದ ಪಾರ್ವತಿ ನಗರದ ಮುಖ್ಯ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಇದೇ ಆಗಸ್ಟ್ 25ರಂದು ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಬಿಕೆ ನಿರ್ಮಲ ತಿಳಿಸಿದ್ದಾರೆ.
ಅವರು ಇಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ರಾಜ ಯೋಗಿನಿ ದಾದಿ ಪ್ರಕಾಶ ಮಣಿಜಿ ಅವರ 18ನೇ ಪವಿತ್ರ ಪುಣ್ಯ ದಿನವನ್ನು (ಆ. 25) ವಿಶ್ವ ಭ್ರಾತೃತ್ವ ದಿನ ಎಂದು ಆಚರಿಸಲಾಗುತ್ತದೆ ಈ ಪವಿತ್ರ ದಿನದ ಸ್ವಣಾರ್ತವಾಗಿ ಬೃಹತ್ ರಕ್ತದಾನವನ್ನು ಹಮ್ಮಿಕೊಳ್ಳಲಾಗಿದೆ, ಭಾರತ ಮತ್ತು ನೇಪಾಳದಲ್ಲಿ 1500ಕ್ಕೂ ಹೆಚ್ಚು ಬ್ರಹ್ಮಕುಮಾರಿ ಸೇವಾ ಕೇಂದ್ರಗಳಲ್ಲಿ ಆಗಸ್ಟ್ 22 ರಿಂದ 25 ರವರೆಗೆ 100 ಗಂಟೆಗಳಲ್ಲಿ ಒಂದು ಲಕ್ಷ ಸಂಗ್ರಹಿಸಿ ಗಿನ್ನಿಸ್ ದಾಖಲೆ ಸ್ಥಾಪಿಸಲು ಸಜ್ಜುಗೊಂಡಿದೆ, ಈಗಾಗಲೇ ರಕ್ತದಾನ ಶಿಬಿರವನ್ನು ಆಗಸ್ಟ್ 17ರಂದು ದೆಹಲಿಯ ಓಂ ಶಾಂತಿ ರಿಟ್ರೀಟ್ ಸೆಂಟರ್ ನಲ್ಲಿ ಕೇಂದ್ರ ಆರೋಗ್ಯ ಸಚಿವ ಜೆಪಿ ನ ಅಡ್ಡ ಉದ್ಘಾಟಿಸಿದ್ದಾರೆ ಈಗ ದೇಶಾದ್ಯಂತ ವಿಸ್ತರಿಸಲಾಗಿದೆ ಅದೇ ಪ್ರಕಾರವಾಗಿ ಬಳ್ಳಾರಿಯಲ್ಲೂ ಸಹ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಈ ಶಿಬಿರದಲ್ಲಿ ಸಂಗ್ರಹಿಸಲಾದ ರಕ್ತವನ್ನು ಸಾರ್ವಜನಿಕರ ಜೀವದಾನಕ್ಕಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವಿವಿಧ ಪದಾಧಿಕಾರಿಗಳಿದ್ದರು.