140 ಶಾಸಕರಿಂದಷ್ಟೇ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿಲ್ಲ: ಬಿಕೆ ಹರಿಪ್ರಸಾದ್

Ravi Talawar
140 ಶಾಸಕರಿಂದಷ್ಟೇ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿಲ್ಲ: ಬಿಕೆ ಹರಿಪ್ರಸಾದ್
WhatsApp Group Join Now
Telegram Group Join Now
ಬೆಂಗಳೂರು (ನ.29): ರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ, ಡಿಸಿಎಂ ಕುರ್ಚಿ ಕಾದಾಟ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಕರ್ನಾಟಕದ ರಿಪೋರ್ಟ್​ ಕಾರ್ಡ್​ ಹಿಡಿದು ದೆಹಲಿಗೆ ತೆರಳಿದ ಎಐಸಿಸಿ ಅಧ್ಯಕ್ಷರು ಹೈಕಮಾಂಡ್ ನಾಯಕರ  ಜೊತೆ ಚರ್ಚೆ ನಡೆಸುತ್ತಿದೆ. ಶನಿವಾರ ಮಹತ್ವದ ಸಭೆ ನಡೆಯಲಿದ್ದು, ಪವರ್ ಶೇರಿಂಗ್  ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಇತ್ತ ಕಾಂಗ್ರೆಸ್​​ ನಾಯಕರು ಆಪ್ತರ ಜೊತೆ ಸಭೆ ಕರೆದು ಗುಸು-ಗುಸು, ಪಿಸು-ಪಿಸು ಅಂತ ಚರ್ಚೆಗಿಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಮಾತಾಡಿದ ಬಿಕೆ ಹರಿಪ್ರಸಾದ್​ ಅವರು 140 ಶಾಸಕರಿಂದ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ ಎಂದಿದ್ದಾರೆ.  
ಮುನಿಯಪ್ಪ ನಿವಾಸದಲ್ಲಿ ಬ್ರೇಕ್‌ ಫಾಸ್ಟ್ ಮೀಟಿಂಗ್: ನಿಯಪ್ಪ ನಿವಾಸದಲ್ಲಿ ಬ್ರೇಕ್‌ ಫಾಸ್ಟ್ ಮೀಟಿಂಗ್ ನಡೆದಿದ್ದು,ಬಿ.ಕೆ. ಹರಿಪ್ರಸಾದ್ , ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ ಉಪಸ್ಥಿತರಿದ್ರು. ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಬಿಕೆ ಹರಿಪ್ರಸಾದ್​ ಎಲ್ರೂ‌ ಹಳೆಯ ಸ್ನೇಹಿತರು. ಈಗ ಭೇಟಿಯಾಗಿ ಮಾತಾಡಿದ್ದೇವೆ ಎಂದಿದ್ದಾರೆ.
WhatsApp Group Join Now
Telegram Group Join Now
Share This Article