ಬೆಳಗಾವಿ. ಕರ್ನಾಟಕ ರಾಜ್ಯದಲ್ಲಿ ವಕ್ಪ ಎಲ್ಲ ಜನಾಂಗಳ ಅಸ್ತಿಯನ್ನು ಕಬಳಿಸುವ ತಂತ್ರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದ್ದು ಈ ಒಂದು ವಕ್ಪ ರೈತ ವಿರೋಧಿ ಸಂಸ್ಥೆಗೆ ಕಿಮ್ಮತ್ತು ನೀಡದೆ ರೈತರಿಗೆ ಅಭಯ ಹಸ್ತ ನೀಡಿ ನೀವು ಅಂಜದಿರಿ ನಿಮ್ಮ ಹೆಸರಿನ ಭೂಮಿ ಯಾವತ್ತಿಗೂ ನಿಮ್ಮದೇ ಆ ಅಸ್ತಿ ವಕ್ಪ ಅಸ್ತಿ ಅಲ್ಲ ಎಂದು ಸರ್ಕಾರದಿಂದ ರೈತರಿಗೆ ನೋಟೀಸ್ ರೈತರಿಗೆ ನೀಡಬೇಕು ನೀಡಬೇಕು ಇಲ್ಲದೆ ಹೋದರೆ ಕಾಂಗ್ರಸ್ ವಿರುದ್ಧ ನಿರಂತರ ಹೋರಾಟ ಮಾಡಲಾಗುವದೆಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ಅವರು ಶುಕ್ರವಾರದಂದು ಜಿಲ್ಲಾಧಿಕಾರಿಗಳ ಆವರಣದಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಘೋಷ ವಾಕ್ಯ ವಕ್ಪ ವಿರುದ್ಧ ಹಾಗೂ ರಾಜ್ಯ ಸರ್ಕಾರ ಮತ್ತು ಸಿ ಎಮ್ ಸಿದ್ದರಾಮಯ್ಯ, ಸಚಿವ ಜಮೀರ ಅಹ್ಮದ್ ವಿರುದ್ಧ ಧರಣಿ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಮುಡಾ, ವಾಲ್ಮೀಕಿ ಹಗರಣ, ದಲಿತರ ಹಣ ದುರ್ಬಳಕೆ, ವಕ್ಪ ರೈತ ವಿರೋಧಿ ಹಗರಣ ನಿರಂತರ ಎಲ್ಲ ಜನಾಂಗಗಳಿಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿ ಅಗಿದ್ದು ಕೂಡಲೇ ಸಿ ಎಮ್ ಸಿದ್ರಾಮಯ್ಯ, ಸಚಿವ ಜಮೀರ ಅಹ್ಮದ ರಾಜೀನಾಮೆ ನೀಡಬೇಕು ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ ನಿರಂತರವಾಗಿ ಒಂದು ಜನಾಂಗದ ಓಲೈಕೆಗೆ ಉಳಿದ ಜನಾಂಗಗಳಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರ ಘೋರ ಅನ್ಯಾಯ ಮಾಡುತ್ತಿದ್ದು ಇದರ ವಿರುದ್ಧ ರಾಜ್ಯ ಬಿಜೆಪಿ, ಜಿಲ್ಲಾ ಬಿಜೆಪಿ ನಿರಂತರ ಹೋರಾಟ ಮಾಡಿ ರೈತರ, ಎಲ್ಲ ಜನಾಂಗಗಳ ಒಳಿತಿಗೆ ನಿರಂತರ ಹೋರಾಟ ಮಾಡಲಾಗುವದು ಈ ವಕ್ಪ ಸಂಸ್ಥೆಗೆ ಕಡಿವಾಣ ಹಾಕಬೇಕು ರೈತರ, ಬಡವರ ಪರ ಕಾಂಗ್ರೆಸ್ ಕೆಲಸ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವದೆಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ ಮಾತನಾಡಿ ಇಷ್ಟೆಲ್ಲ ಹಗರಣ, ಪ್ರಕರಣ, ಜನ ವಿರೋಧಿ ಧೋರಣೆ ನಡೆದು ಹಗರಣಗಳ ಸರ್ಕಾರ ಆಗಿದ್ದರು ಸಿ ಎಮ್ ಸಿದ್ರಾಮಯ್ಯ ಮತ್ತು ಸಚಿವ ಜಮೀರ ಅಹ್ಮದ್ ರಾಜೀನಾಮೆ ಕೊಡದೆ ಬಂಡತನ ತೋರಿಸುತ್ತಿದ್ದಾರೆ ಎಂದರು.
ಈ ಪ್ರತಿಭಟನೆ ಧರಣಿಯಲ್ಲಿ ಮಾಜಿ ಶಾಸಕರಾದ ಜಗದೀಶ ಮೆಟಗುಡ, ಅರವಿಂದ ಪಾಟೀಲ, ಮಲ್ಲಣ್ಣ ಯಾದವಾಡ, ಮಹಾನಗರ ಅಧ್ಯಕ್ಷ ಗೀತಾ ಸುತಾರ, ಬಿಜೆಪಿ ರಾಜ್ಯ ಮಾಧ್ಯಮ ಸಲಹಾ ಸಮಿತಿ ಸದಸ್ಯ ಎಫ್ ಎಸ್ ಸಿದ್ದನಗೌಡರ, ಡಾ ಸೋನಾಲಿ ಸರ್ಬೋಲಿತ , ಉಜ್ವಲ ಬಣಜವಾಡಿ , ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ ಕಡಿ, ಸುಭಾಷ ತುರಮರಿ , ಸಂತೋಷ ಹಡಪದ, ಎಲ್ಲ ಬಿಜೆಪಿ ತಾಲೂಕಾ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಪಧಧಿಕಾರಿಗಳು, ಬೆಳಗಾವಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.ಈ ಒಂದು ಪ್ರತಿಭಟನೆ ಧರಣಿಯಲ್ಲಿ ಗ್ರಾಮೀಣ ಭಾಗದ ಬಿಜೆಪಿ ಕಾರ್ಯಕರ್ತರ ವಿನೂತನ ಸರ್ಕಾರದ ವಿರೋಧಿ ಘೋಷಣೆಗಳು ಗಮನ ಸೆಳೆದವು.