ಅಹೋರಾತ್ರಿ ರೈತರೊಂದಿಗೆ ಧರಣಿ ಮಾಡಿ, ಅಲ್ಲೇ ಮಲಗಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ 

Pratibha Boi
ಅಹೋರಾತ್ರಿ ರೈತರೊಂದಿಗೆ ಧರಣಿ ಮಾಡಿ, ಅಲ್ಲೇ ಮಲಗಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ 
WhatsApp Group Join Now
Telegram Group Join Now
ಗುರ್ಲಾಪೂರ. ಕಬ್ಬು ಬೆಳೆಗೆ ಪ್ರತಿ ಟನಗೆ ರೂ. 3500/- ದರ ನೀಡಲು ಒತ್ತಾಯಿಸಿ ಕಳೆದ 6 ದಿನಗಳಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸನ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿ ಸ್ಥಳದಲ್ಲಿ   ನಡೆಯುತ್ತಿರುವ ಬ್ರಹತ್ ರೈತ ಹಾಗೂ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಯಾವ ಸಚಿವರು ಬಾರದ ಹಿನ್ನೆಲೆಯಲ್ಲಿ   ಬೆಂಗಳೂರು ಮೂಲಕ ಬೆಳಗಾವಿಗೆ ಬಂದು ಅಲ್ಲಿಂದ ಮದ್ಯಾಹ್ನ 12 ಘಂಟೆಗೆ  ರೈತರ ಪ್ರತಿಭಟನೆಗೆ ಸಾಥ್ ನೀಡಿ, ಅವರಿಗೆ ಬೆಂಬಲ ಕೊಟ್ಟು, ರಾಜ್ಯ ಸರ್ಕಾರಕ್ಕೆ ನಿನ್ನೆ ಸಂಜೆ 5 ಘಂಟೆಯ ಗಡವು ನೀಡಿದರು,ಯಾವ ಮಂತ್ರಿಗಳು ಬಾರದ ಹಿನ್ನೆಲೆಯಲ್ಲಿ  ಇಂದು ಬುಧವಾರ  ಅವರ 50 ನೇ ಜನ್ಮದಿನ ಇದ್ದರು ಮರಳಿ ಬೆಂಗಳೂರು ಅಥವಾ ಸ್ವಕ್ಷೇತ್ರ ಶಿಕಾರಿಪುರಕ್ಕೆ ತೆರಳದೇ, ರಾತ್ರಿ ರೈತರೊಂದಿಗೆ ಧರಣಿ ಮಾಡಿ, ಅವರೊಂದಿಗೆ ಮಲಗಿಕೊಂಡು ದಿ. 5 ರಂದು ಕೂಡಾ ನಾನು ನಿಮ್ಮೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿ ರೈತರ ಹೋರಾಟಕ್ಕೆ ತಮ್ಮ ಬೆಂಬಲ ನೀಡಿ, ರಾಜ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡು ಸಕ್ಕರೆ ಸಚಿವರು, ಜಿಲ್ಲೆಯ ಸಚಿವರು ಕೂಡಾ ಪ್ರತಿಭಟನೆ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಸಿ ಎಮ್ ಸಿದ್ರಾಮಯ್ಯ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡ ಮೇಲೆ ಇಂದು ಬುಧವಾರ ದಿ. 05-11-2025 ರಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವಾಯ್ ವಿಜಯೇಂದ್ರ ಮತ್ತು ಅಪಾರ ಪ್ರಮಾಣದ ರೈತ ಮುಖಂಡರು ಮತ್ತು ರೈತರ ಧರಣಿ, ಪ್ರತಿಭಟನೆಗೆ ಮಣಿದು  ರಾಜ್ಯದ ಹಿರಿಯ ಸಚಿವರಾದ ಹೆಚ್ ಕೆ ಪಾಟೀಲ ಅವರನ್ನು ಗುರ್ಲಾಪೂರ ಗ್ರಾಮಕ್ಕೆ ರೈತರೊಂದಿಗೆ ಮಾತುಕತೆಗೆ ಕಳಿಸುತಿದ್ದು ಈಗ ವಿಜಯೇಂದ್ರ ಅವರು ಇಂದು ಬುಧವಾರ ಇನ್ನೂವರೆಗೂ ಇದ್ದು  ರೈತ ಹೋರಾಟದಲ್ಲಿ ದುಮುಕಿರುವ ಹಿನ್ನೆಲೆಯಲ್ಲಿ ರೈತರಿಗೆ ಸಿಹಿ ಸುದ್ದಿ ಸಿಗುವ ಲಕ್ಷಣ ಗೋಚರಿಸುತ್ತಿವೆ. ತಮ್ಮ 50 ಜನ್ಮದಿನವನ್ನು ಸ್ವ ಕ್ಷೇತ್ರ ಅಥವಾ ಬೆಂಗಳೂರಲ್ಲಿ ಆಚರಿಸಿಕೊಳ್ಳದೆ ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರೊಂದಿಗೆ ಹೊರವಲಯದಲ್ಲಿ ರಾತ್ರಿ ಮಲಗಿ ಜನನಾಯಕರಾಗಿ ಹೊರಹೋಮ್ಮತ್ತಿದ್ದಾರೆ ಬಿ ವಾಯ್ ವಿಜಯೇಂದ್ರ ಅವರು.
   ಈ ಸಂದರ್ಭದಲ್ಲಿ ಅವರೊಂದಿಗೆ ರೈತ ಮುಖಂಡರಾದ ಚೂನಪ್ಪ ಪೂಜೇರಿ,ಶಶಿಕಾಂತ ಗುರೂಜಿ, ಶ್ರೀಶೈಲ ಅಂಗಡಿ  ಹಾಗೂ  ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಸಿದ್ದು ಸವದಿ, ದುರ್ಯೋದನ ಐಹೋಳೆ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಪಾಟೀಲ, ಬೆಳಗಾವಿ ಜಿಲ್ಲಾ ಮಹಾನಗರ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ, ರಾಜ್ಯ ಬಿಜೆಪಿ ಮುಖಂಡ  ಎಫ್ ಎಸ್ ಸಿದ್ದನಗೌಡರ ಹಾಗೂ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ರೈತ ಮುಖಂಡರು, ಅಪಾರ ಪ್ರಮಾಣದ ಕಬ್ಬು ಬೆಳೆಗಾರರು, ರೈತರು, ಯುವಕರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article