ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Ravi Talawar
ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರ: ಇಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪಕ್ಷದಿಂದ ಪೆಟ್ರೋಲ್ ಇಲ್ಲದದ್ವಿ ಚಕ್ರವಾಹನವನ್ನು ಹಗ್ಗ ಕಟ್ಟಿ ಎಳೆಯುವ ಮೂಲಕ ಪ್ರತಿಭಟನೆ ನಡೆಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಕಾರ್ಯಕರ್ತರು. ಚನ್ನಮ್ಮನ ಕಿತ್ತೂರ. ಪೆಟ್ರೋಲ್, ಡಿಜೆಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಬಿಜೆಪಿ ಮಂಡಳ ವತಿಯಿಂದ ಕಿತ್ತೂರಿನ ರಾಷ್ಟ್ರೀಯ ಹೆದ್ದಾರೆ ಪಕ್ಕದ ಚನ್ನಮ್ಮಾಜಿಯ ವರ್ತುಳದಲ್ಲಿ ರಸ್ತೆ ತಡೆ ನಡೆಸಿ ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿ ಗುರುವಾರ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೇಸ್‌ನ್ನು ಹಿನಾಯವಾಗಿ ಸೋಲಿಸಿದ್ದಕ್ಕಾಗಿ ಎಲ್ಲ ದರಗಳನ್ನು ಏರಿಕೆಗೊಳಸಿ ದ್ವೇಷದ ರಾಜಕಾರವನ್ನು ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಂದ ತೆರಿಗೆಯನ್ನು ವಸೂಲಿ ಮಾಡುವ ಕ್ರಮ ಕೈಗೊಂಡಿದ್ದಾರೆ.

ಮುಖ್ಯ ಮಂತ್ರಿಗಳು ಇಂಧನ ಬೆಲೆ ಏರಿಕೆ ಮಾಡಿದ ರಾಜ್ಯಗಳನ್ನು ಹೋಲಿಕೆ ಮಾಡುವದನ್ನು ಬಿಟ್ಟು ಕಡಿಮೆ ಇದ್ದ ರಾಜ್ಯಗಳ ಹೋಲಿಕೆ ಮಾಡಿ ದರ ಕಡಿಮೆಗೊಳಿಸಬೇಕು ಹೀಗಾದರೆ ನೀವು ಜನರ ಶಾಪದಿಂದ ನಿಮ್ಮ ಕುರ್ಚಿಗಳನ್ನು ಬಿಟ್ಟು ಇಳಿಯಬೇಕಾಗುವದು ಎಂದು ಎಚ್ಚರಿಸಿದರು.

ಮಂಡಳ ಅದ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಮರಳು ಮಾಡಿ ಸರಕಾರ ರಚಿಸಿ ಈಗ ದರಗಳನ್ನು ಏರಿಕೆ ಮಾಡಿ ಜನರನ್ನು ದಿವಾಳಿಯನ್ನಾಗಿ ಮಾಡುತ್ತಿದೆ. ಈಗಿನ ತಂತ್ರಜ್ಞಾನ ಯುಗದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಎಲ್ಲ ರೈತರು ಡಿಸೈಲ್, ಪೆಟ್ರೋಲ್ ಮೇಲೆ ಅವಲಂಬಿತರಾಗಿದ್ದಾರೆ ಹೀಗಿರುವಾಗ ದರ ಏರಿಕೆ ಮಾಡಿ ಸರಕಾರವು ರೈತರಿಗೆ ಅನ್ಯಾಯ ಮಾಡುತ್ತಿದೆ ತಕ್ಷಣ ದರಗಳನ್ನು ಕಡಿಮೆಗೊಳಿಸಬೇಕು ಇಲ್ಲದಿದ್ದರೆ ಬಿಜೆಪಿಯಿಂದ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಬಿಜೆಪಿ ನಾಯಕಿ ಲಕ್ಷ್ಮೀ ಇನಾಮದಾರ ಮಾತನಾಡಿದರು. ಸಂದೀಪ ದೇಶಪಾಂಡೆ, ಎಸ್ ಆರ್ ಪಾಟೀಲ, ನಿಜಲಿಂಗಯ್ಯ  ಹಿರೇಮಠ, ಅರುಣಕುಮಾರ ಬಿಕ್ಕಣ್ಣವರ, ಸರಸ್ವತಿ ಹೈಬತ್ತಿ, ಉಮಾದೇವಿ ಬಿಕ್ಕಣ್ಣವರ, ರವೀರಾಜ ಇನಾಮದಾರ, ಯಲ್ಲಪ್ಪ  ವಕ್ಕುಂದ, ಫಕ್ಕೀರ ಜಾಂಗಟಿ, ಹರ್ಷಾ ಕರೀಕಟ್ಟಿ, ಬಸವರಾಜ
ಪುಟ್ಟಿ, ಕಿರಣ ಪಾಟೀಲ, ಶಿವಾನಂದ ಹನಮಸಾಗರ, ಶ್ಯಾಮ ಶಿಲೇದಾರ, ದಿನೇಶ ವಳಸಂಗ, ನಾಗೇಶ ಬೆಣ್ಣಿ, ಸೇರಿದಂತೆ ಇತರರು ಇದ್ದರು.

ಈ ವಾಹನದ ಮೇಲೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ ಇವರನ್ನು ಈ ವಾಹನದ ಮೇಲೆ ಕೂಡ್ರಿಸಿ ಹಗ್ಗದಿಂದ ಎಳೆಯುವ ಮೂಲಕ ವಿನೂತನ ಪ್ರತಿಭಟನೆಯನ್ನು ನಡೆಸಿ ನಂತರ ಸರಕಾರದ ವಿರುದ್ದ  ಘೋಷಣೆಗಳನ್ನು ಕೂಗುತ್ತ ತಹಶೀಲ್ದಾರ
ಕಚೇರಿಗೆ ತೆರಳಿ ತಹಶೀಲ್ದಾರ ರವೀಂದ್ರ ಹಾದಿಮನಿ ಇವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

WhatsApp Group Join Now
Telegram Group Join Now
Share This Article