ನವದೆಹಲಿ, ಏಪ್ರಿಲ್ 29: ಪಾಕಿಸ್ತಾನದ 5 ಲಕ್ಷ ಯುವತಿಯರು ಭಾರತದವರನ್ನು ಮದುವೆಯಾಗಿದ್ದಾರೆ. ಆದರೆ ಇಲ್ಲಿಯವರೆಗೂ ಭಾರತದ ಪೌರತ್ವ ಪಡೆದಿಲ್ಲ. ದೇಶದ ಒಳಗಿರುವ ಶತ್ರುಗಳ ಜತೆ ಹೋರಾಡುವುದು ಹೇಗೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಸಂಬಂಧಿತ ಭಯೋತ್ಪಾದನೆಯ ಹೊಸ ಮುಖ ಈಗ ಹೊರಹೊಮ್ಮಿದೆ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಮದುವೆಯಾದ ನಂತರ ಭಾರತಕ್ಕೆ ಬರುವ ಪಾಕಿಸ್ತಾನಿ ಹುಡುಗಿಯರ ವಿಷಯವನ್ನು ನಿಶಿಕಾಂತ್ ದುಬೆ ಹೇಳಿದ್ದಾರೆ. ಆದರೆ ಅವರಿಗೆ ಇನ್ನೂ ಭಾರತೀಯ ಪೌರತ್ವ ಸಿಕ್ಕಿಲ್ಲ. ಪಾಕಿಸ್ತಾನಿ ಭಯೋತ್ಪಾದನೆಯ ಹೊಸ ಮುಖ ಈಗ ಹೊರಹೊಮ್ಮಿದೆ. 5 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ಹುಡುಗಿಯರು ಮದುವೆಯಾದ ನಂತರ ಭಾರತದಲ್ಲಿ ವಾಸಿಸುತ್ತಿದ್ದಾರೆ, ಆದರೆ ಇಲ್ಲಿಯವರೆಗೆ ಅವರಿಗೆ ಭಾರತೀಯ ಪೌರತ್ವ ಸಿಕ್ಕಿಲ್ಲ. ಒಳಗೆ ಪ್ರವೇಶಿಸಿರುವ ಈ ಶತ್ರುಗಳ ವಿರುದ್ಧ ನಾವು ಹೇಗೆ ಹೋರಾಡುವುದು? ಎಂದಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು. ಏಪ್ರಿಲ್ 27 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ದೀರ್ಘಾವಧಿಯ, ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳನ್ನು ಹೊರತುಪಡಿಸಿ ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ಎಲ್ಲಾ ವರ್ಗದ ವೀಸಾಗಳನ್ನು ರದ್ದುಗೊಳಿಸಿತು.