ಬಿಜೆಪಿ ಒಡಿಶಾದಲ್ಲಿ ಕೇಸರಿ ಬಾವುಟ ಹಾರಿಸುವ ಸಾಧ್ಯತೆ

Ravi Talawar
ಬಿಜೆಪಿ ಒಡಿಶಾದಲ್ಲಿ ಕೇಸರಿ ಬಾವುಟ ಹಾರಿಸುವ ಸಾಧ್ಯತೆ
WhatsApp Group Join Now
Telegram Group Join Now

ಭುವನೇಶ್ವರ್, ಜೂನ್ 4: ಭಾರತೀಯ ಜನತಾ ಪಕ್ಷ ಒಡಿಶಾದಲ್ಲಿ ಕೇಸರಿ ಬಾವುಟ ಹಾರಿಸುವ ಸಾಧ್ಯತೆ ಕಾಣುತ್ತಿದೆ. ಲೋಕಸಭೆ ಚುನಾವಣೆಯ ಜೊತೆ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಒಡಿಶಾದೂ ಒಂದು.

147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಹುಮತಕ್ಕೆ 74 ಸ್ಥಾನಗಳ ಅವಶ್ಯಕತೆ ಇದೆ. ಮಧ್ಯಾಹ್ನ 12 ಗಂಟೆಗೆ ಬಂದಿರುವ ಟ್ರೆಂಡ್ ಪ್ರಕಾರ ಬಿಜೆಪಿ 78 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. 2000ರಿಂದ 23 ವರ್ಷ ಕಾಲ ಸತತವಾಗಿ ಅಧಿಕಾರದಲ್ಲಿದ್ದ ಬಿಜೆಡಿ 54 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯ ತೃಪ್ತಿ ಹೊಂದಿದೆ.

ಒಡಿಶಾ ರಾಜ್ಯದಲ್ಲಿ ಹಿಂದಿನ 16 ವಿಧಾನಸಭೆಯಲ್ಲಿ ಬಿಜೆಪಿಯಾಗಲೀ ಅದರ ಹಿಂದಿನ ಅವತಾರವಾದ ಜನಸಂಘವಾಗಲೀ ಒಮ್ಮೆಯೂ ಅಧಿಕಾರ ಪಡೆದಿಲ್ಲ. ಈಗ 17ನೇ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆ ರಾಜ್ಯದಲ್ಲಿ ಕೇಸರಿ ಬಾವುಟ ಹಾರಾಡುವಂತಿದೆ.

WhatsApp Group Join Now
Telegram Group Join Now
Share This Article