ನವದೆಹಲಿ, ಮಾರ್ಚ್ 24:‘‘ಭಾರತದ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅನುಮತಿ ಇಲ್ಲ’’ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದವರಿಗೆ ಹಿಂದುಳಿದ ವರ್ಗಗಳ ಆಧಾರದಲ್ಲಿ ಮೀಸಲಾತಿ ನೀಡಬೇಕೇ ವಿನಃ ಧರ್ಮ ಆಧಾರಿತ ಮೀಸಲಾತಿ ನೀಡುವುದು ಸಂವಿಧಾನದ ವಿರುದ್ಧವಾಗುತ್ತದೆ ಎಂದರು ಹೇಳಿದರು.
ಬಿಜೆಪಿ ತಂದಿರುವ ಸಕಾರಾತ್ಮಕ, ಸಮಗ್ರ ಮತ್ತು ಬೆಳವಣಿಗೆ ಆಧಾರಿತ ನೀತಿಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಮತ-ಬ್ಯಾಂಕ್ ರಾಜಕೀಯವು ಹೊಂದಿದೆಯೇ ಎಂದು ಪ್ರಶ್ನಿಸಿದರು. ಶಾ ಬಾನೋ ಪ್ರಕರಣ ಮತ್ತು ತ್ರಿವಳಿ ತಲಾಖ್ ಕಾನೂನಿನ ವಿರುದ್ಧದ ತೀವ್ರ ವಿರೋಧದಂತಹ ನಿದರ್ಶನಗಳನ್ನು ಪ್ರಸಾದ್ ಸ್ಪಷ್ಟವಾಗಿ ಉಲ್ಲೇಖಿಸಿದರು.