ಹಾಸನ, ಮೇ 13: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೆ 3 ದಿನ ಪೊಲೀಸ್ ಕಸ್ಟಡಿಗೆ ನೀಡಿ ಹೊಳೆನರಸೀಪುರ ಜೆಎಂಎಫ್ಸಿ ಕೋರ್ಟ್ ನ್ಯಾಯಾಧೀಶರಾದ ಪ್ರವೀಣ್ರಿಂದ ಆದೇಶ ಹೊರಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ಪೊಲೀಸರು ಕಸ್ಟಡಿಗೆ ಕೇಳಿದ್ದ ಅರ್ಜಿ ಪರಿಗಣಿಸಿ 3 ದಿನ ಅಂದರೆ ನಾಳೆ ಬೆಳಗ್ಗೆ 9ರಿಂದ ಮೇ 16ರ ರಾತ್ರಿವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಮೇ 11ರಂದು ದೇವರಾಜೇಗೌಡರ ಬಂಧಿಸಲಾಗಿತ್ತು.
14 ದಿನಗಳ ಕಾಲ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ದೇವರಾಜೇಗೌಡರನ್ನು ಹಾಸನ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಇನ್ನು ಎಂಟು ದಿನಗಳಲ್ಲಿ ಜೈಲಿನಿಂದ ಹೊರಗೆ ಬರ್ತೀನಿ, ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತೆ ಅಂತಾ ಹೇಳಿದ್ದರು.
ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ಯಾ? ಅನ್ನೋ ಅನುಮಾನವೂ ಶುರುವಾಗಿದೆ. ಯಾಕೆಂದ್ರೆ ಪೆನ್ಡ್ರೈವ್ ಪ್ರಕರಣದಲ್ಲಿ ಮಹತ್ವದ ದಾಖಲೆಯೇ ಬಿಡುಗಡೆ ಮಾಡಿದ್ರು, ಇಷ್ಟೇ ಅಲ್ಲ, ಆಡಿಯೋ ಬಾಂಬ್ ಕೂಡ ಹಾಕಿದ್ದರು. ಡಿಸಿಎಂ ಡಿಕೆ.ಶಿವಕುಮಾರ್ ವಿರುದ್ಧ ಆರೋಪ ಕೂಡ ಮಾಡಿದ್ದರು. ಇದೇ ಕಾರಣದಿಂದಲೇ ಜೈಲು ಪಾಲಾದ್ರಾ ಅನ್ನೋ ಗುಮಾನಿಯೂ ಎದ್ದಿದೆ. ಯಾಕೆಂದ್ರೆ ಮೂಲಕ ದೂರಿನಲ್ಲಿ ಅತ್ಯಾಚಾರ ಕೇಸ್ ದಾಖಲಾಗಿರಲಿಲ್ಲ. ಬಳಿಕ ಹಳೇ ಕೇಸ್ಗೆ ಮತ್ತೊಂದು ಸೆಕ್ಷನ್ ಸೇರಿಸಿ ಅರೆಸ್ಟ್ ಮಾಡಲಾಗಿದೆ ಅಂತೆ. ದೂರು ನೀಡಿ ತಿಂಗಳ ಬಳಿಕ ಅತ್ಯಾಚಾರ ಸೆಕ್ಷನ್ ಸೇರಿಸಲಾಗಿದೆ. ಏಪ್ರಿಲ್ 1ರಂದು ದಾಖಲಾಗಿದ್ದ ಮೂಲ ದೂರು ಜಾಮೀನು ಸಿಗುವಂತಾಹ ಕೇಸ್ ಆಗಿತ್ತು.
ನ್ನು ಕೆ.ಆರ್ ನಗರ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಕೇಸ್ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು 42 ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ಕರೆತಂದಿದ್ದರು. ಸಂತ್ರಸ್ತೆ ಕಿಡ್ನಾಪ್ಗೆ ಸಹಕರಿಸಿದ್ದ ಆರೋಪ ಹಿನ್ನಲೆ ಬಂಧಿಸಲಾಗಿದೆ. ಮಧು, ಮನು, ಸುಜಯ್ ಮೂವರು ಸತೀಶ್ ಬಾಬುಗೆ ಸಹಾಯ ಮಾಡಿದ ಆರೋಪ ಹಿನ್ನಲೆ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.
ಇದೀಗ ಸತೀಶ್ ಬಾಬು ಹೊರತು ಪಡಿಸಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಾಲ್ಕು ದಿನ ಸತೀಶ್ ಬಾಬು ರನ್ನು ಎಸ್ಐಟಿ ಪೊಲೀಸ್ ಕಸ್ಟಡಿಗೆ ಕೇಳಿದೆ. ಇನ್ನು ವಿಚಾರಣೆ ಬಾಕಿ ಇರುವ ಹಿನ್ನಲೆ ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.