ಗೂಗಲ್‌, ಯುಟ್ಯೂಬ್‌ನಲ್ಲಿ ರೂ.100 ಕೋಟಿ ಜಾಹೀರಾತು ನೀಡಿದ ದೇಶದ ಮೊದಲ ಪಕ್ಷ ಬಿಜೆಪಿ!

Ravi Talawar
ಗೂಗಲ್‌, ಯುಟ್ಯೂಬ್‌ನಲ್ಲಿ ರೂ.100 ಕೋಟಿ ಜಾಹೀರಾತು ನೀಡಿದ ದೇಶದ ಮೊದಲ ಪಕ್ಷ ಬಿಜೆಪಿ!
WhatsApp Group Join Now
Telegram Group Join Now

ಹೊಸದಿಲ್ಲಿ, 26: ಆನ್‌ಲೈನ್‌ ಸರ್ಚ್ ಎಂಜಿನ್‌ ದಿಗ್ಗಜ ಗೂಗಲ್‌ ಮತ್ತು ಅದರ ವಿಡಿಯೊ ಪ್ಲಾಟ್‌ಫಾರ್ಮ್‌ ಯುಟ್ಯೂಬ್‌ನಲ್ಲಿ 100 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಜಾಹೀರಾತು ನೀಡಿದ ದೇಶದ ಮೊದಲ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮುದ್ರಣ ಮಾಧ್ಯಮದ ಜತೆಗೆ ಡಿಜಿಟಲ್‌ ರೂಪದಲ್ಲೂ ಜಾಹೀರಾತು ನೀಡುತ್ತಿವೆ. ಬಿಜೆಪಿಯು ಡಿಜಿಟಲ್‌ ಮಾದರಿಯಲ್ಲಿ ಜಾಹೀರಾತಿಗೆ ವಿನಿಯೋಗಿಸಿದ ಹಣವು ಕಾಂಗ್ರೆಸ್‌, ಡಿಎಂಕೆ ಮತ್ತು ಪ್ರಶಾಂತ್‌ ಕಿಶೋರ್‌ ಅವರ ರಾಜಕೀಯ ಸಲಹಾ ಸಂಸ್ಥೆ ‘ಐ-ಪ್ಯಾಕ್‌’ ಪಕ್ಷಗಳ ಜಾಹೀರಾತಿಗೆ ವ್ಯಯಿಸಿದ ಹಣಕ್ಕೆ ಸಮನಾಗಿದೆ.

2018 ರಿಂದಲೂ ಗೂಗಲ್‌ ಸಂಸ್ಥೆಯು ಗೂಗಲ್‌ ಜಾಹೀರಾತು ಪಾರದರ್ಶಕ ವರದಿ ಪ್ರಕಟಿಸುತ್ತಿದ್ದು, 2018ರ ಮೇ 31ರಿಂದ 2024ರ ಏಪ್ರಿಲ್‌ 25ರ ಅವಧಿಯಲ್ಲಿ ಗೂಗಲ್‌ನಲ್ಲಿ ಪ್ರಕಟವಾದ ರಾಜಕೀಯ ಜಾಹೀರಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ವರದಿ ಪ್ರಕಟಿಸಲಾಗಿದೆ. 2018ರಿಂದ ಇಲ್ಲಿಯವರೆಗೂ ಗೂಗಲ್‌ನಲ್ಲಿಪ್ರ ಕಟಗೊಂಡ ಸುಮಾರು 390 ಕೋಟಿ ರೂ. ಮೌಲ್ಯದ ‘ರಾಜಕೀಯ ಜಾಹೀರಾತು’ಗಳಲ್ಲಿ ಬಿಜೆಪಿಯ ಪಾಲು ಶೇ.26ರಷ್ಟಿದೆ ಎಂದು ‘ಇಂಡಿಯಾ ಟುಡೆ’ ವೆಬ್‌ಸೈಟ್‌ ವರದಿ ಮಾಡಿದೆ.

ಸುದ್ದಿ ರೂಪದ ಜಾಹೀರಾತು, ಸರ್ಕಾರದ ಪ್ರಚಾರ ಇಲಾಖೆಗಳು ನೀಡುವ ಜಾಹೀರಾತು, ನಟ-ನಟಿ ಹಾಗೂ ರಾಜಕಾರಣಿಗಳನ್ನು ಒಳಗೊಂಡಿರುವ ವಾಣಿಜ್ಯ ರೂಪದ ಪಕ್ಷದ ಜಾಹೀರಾತುಗಳನ್ನು ‘ರಾಜಕೀಯ ಜಾಹೀರಾತು’ ಎಂದು ವಿಶಾಲ ಅರ್ಥದಲ್ಲಿಗೂಗಲ್‌ ವ್ಯಾಖ್ಯಾನಿಸಿದೆ.

2018ರ ಮೇನಿಂದ 2024ರ ಏಪ್ರಿಲ್‌ ಅವಧಿಯಲ್ಲಿಬಿಜೆಪಿಯು ಪ್ರಕಟಿಸಿದ 2,17,992 ವಿಷಯ ತುಣುಕುಗಳ (ಕಂಟೆಂಟ್‌ ಪೀಸಸ್‌) ಪೈಕಿ 1,61,000ಕ್ಕಿಂತ ಹೆಚ್ಚು ವಿಷಯ ತುಣುಕುಗಳನ್ನು ‘ರಾಜಕೀಯ ಜಾಹೀರಾತು’ ಎಂದು ಗೂಗಲ್‌ ಪ್ರಕಟಿಸಿದೆ. ಬಿಜೆಪಿಯ ಬಹುಪಾಲು ಜಾಹೀರಾತುಗಳು ಕರ್ನಾಟಕದ ಜನತೆಯನ್ನು ಗುರಿಯಾಗಿಸಿಕೊಂಡು ನೀಡಿದ್ದಾಗಿವೆ. ಕರ್ನಾಟಕದ ಜನತೆಯನ್ನು ಗುರಿಯಾಗಿಸಿಕೊಂಡು 10.8 ಕೋಟಿ ರೂ., ಉತ್ತರ ಪ್ರದೇಶದ ಜನತೆಯನ್ನು ಗುರಿಯಾಗಿಸಿಕೊಂಡು 10.3 ಕೋಟಿ ರೂ. ರಾಜಸ್ಥಾನ ಮತ್ತು ದಿಲ್ಲಿನಿವಾಸಿಗಳನ್ನು ಗುರಿಯಾಗಿಸಿಕೊಂಡು ಕ್ರಮವಾಗಿ 8.5 ಕೋಟಿ ರೂ. ಹಾಗೂ 7.6 ಕೋಟಿ ರೂ. ಮೌಲ್ಯದ ಜಾಹೀರಾತುಗಳನ್ನು ಬಿಜೆಪಿ ನೀಡಿದೆ. ಒಟ್ಟಾರೆಯಾಗಿ ಗೂಗಲ್‌ನಲ್ಲಿ’ರಾಜಕೀಯ ಜಾಹೀರಾತು’ಗಳ ಪ್ರಮುಖ ಆದ್ಯತೆಯಾಗಿ ತಮಿಳುನಾಡು ಗುರುತಿಸಿಕೊಂಡಿದೆ.

ಕಾಂಗ್ರೆಸ್‌ ನಂತರದಲ್ಲಿ ಸ್ಥಾನದಲ್ಲಿ ಡಿಎಂಕೆ (42 ಕೋಟಿ ರೂ), ಬಿಆರ್‌ಎಸ್‌ (12 ಕೋಟಿ ರೂ.) ಇದೆ. ಐ-ಪ್ಯಾಕ್‌ ಸಂಸ್ಥೆಯು ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪರವಾಗಿ 6.4 ಕೋಟಿ ರೂ., ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರವಾಗಿ 4.8 ಕೋಟಿ ರೂ. ಮೌಲ್ಯದ ಜಾಹೀರಾತು ನೀಡಿದೆ ಎಂದು ಇಂಡಿಯಾ ಟುಡೆ ವೆಬ್‌ಸೈಟ್‌ ತಿಳಿಸಿದೆ.

 

 

WhatsApp Group Join Now
Telegram Group Join Now
Share This Article