ಚನ್ನಮ್ಮನ ಕಿತ್ತೂರು: ಇಲ್ಲಿನ ಪಟ್ಟಣ ಪಂಚಾಯತ ಸದಸ್ಯ ನಾಗರಾಜ ಅಸುಂಡಿ ಅಪಹರಣದಲ್ಲಿ ಪೊಲೀಸರು ಮತ್ತು ಅಧಿಕಾರಿಗಳು ದಿವ್ಯ ನಿರ್ಲಕ್ಷ ದೋರಣೆ ತೋರಿ ಸರ್ಕಾರದ ಪರವಾಗಿ, ಜನರ ವಿರುದ್ಧವಾಗಿ ಕಾರ್ಯ ಮಾಡಿ ಜನಪ್ರತಿನಿದಿನಗಳ ಪರವಾಗಿ ಕೆಲಸ ಮಾಡುತ್ತಿದ್ದು, ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರು ಧಾಖಲೆ ಸಮೇತ ನಾಗರಾಜ ಅಸುಂಡಿ ಅಪಹಾರನಕ್ಕೆ ಬಳಸಿದ ವಾಹನ, ರೆಸಾರ್ಟ್ ಬಗ್ಗೆ ಮಾಹಿತಿ ನೀಡಿದರು ಇನ್ನೂವರೆಗೂ ಕ್ರಮ ಕೈಗೊಂಡಿಲ್ಲ. ನಮ್ಮ ಚನ್ನಮನ ಕಿತ್ತೂರು ಕ್ಷೇತ್ರದಲ್ಲಿ ಗುಂಡಾ ಗರ್ದಿ ನಡೆಯುವದಿಲ್ಲ ಎಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಆರೋಪ ಮಾಡಿದರು.
ಅವರು ಸೋಮವಾರದಂದು ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪಟ್ಟಣ ಪಂಚಾಯತ ಸದಸ್ಯ ನಾಗರಾಜ್ ಅಸುಂಡಿ ಅಪಹರಣ ಕುರಿತು ಅಧಿಕಾರಿಗಳು, ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಈ ಕೃತ್ಯಕ್ಕೆ ಕಾಂಗ್ರೆಸ್ ನೇರ ಹೊಣೆಯಾಗಿದ್ದು ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ತಾಯಿ ಚನ್ನಮ್ಮಾಜಿಯ ಕ್ಷೇತ್ರ ಕಿತ್ತೂರ ನಾಡಿಗೆ ಅಪಮಾನ ಮಾಡುತ್ತಿದೆ ಎಂದರು.
ಬೆಳಗಾವಿ ಸಂಸದ ಜಗದೀಶ ಶೆಟ್ಟರ ಮಾತನಾಡಿ ಇದು ಕಾಂಗ್ರಸ್ ಪಕ್ಷಕ್ಕೆ ನಾಚಿಕೆಗೆಡಿನ ಸಂಗತಿ ಅಗಿದ್ದು, ಕಾನೂನು, ಸುವ್ಯವಸ್ಥೆ ನಿರ್ಲಕ್ಷಿಸಿ ಕೆಟ್ಟ ಆಡಳಿತ ನಡೆಸುತಿದ್ದೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ, ಲಕ್ಷ್ಮೀ ಇನಾಮದಾರ, ಡಾ. ಸೋನಾಲಿ ಸಾರ್ಬೋಬತ, ಬಿಜೆಪಿ ಪದಾಧಿಕಾರಿಗಳಾದ ಸಂದೀಪ್ ದೇಶಪಾಂಡೆ, ಬಸವರಾಜ ಪರವನವರ, ಉಳವಪ್ಪ ಉಳ್ಳಾಗಡ್ಡಿ, ಬಿ ಎಫ್. ಕೊಳದೂರ, ಶ್ರೀಕರ ಕುಲಕರ್ಣಿ, ಶಂಕರ ಮಾಡಲಗಿ, ನಿಂಗನಗೌಡ ದೊಡ್ಡಗೌಡರ, ಮಲ್ಲಿಕಾರ್ಜುನ ಉಳ್ಳಾಗಡ್ಡಿ ಸೇರಿದಂತೆ ಕಿತ್ತೂರು ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.