ಬಿಜೆಪಿ ಮುಸ್ಲಿಂ ವಿರೋಧಿಯಲ್ಲ; ಸರ್ವರ ಏಳಿಗೆ ಬಯಸುವ ಪಕ್ಷ: ವಿಜಯೇಂದ್ರ

Ravi Talawar
ಬಿಜೆಪಿ ಮುಸ್ಲಿಂ ವಿರೋಧಿಯಲ್ಲ; ಸರ್ವರ ಏಳಿಗೆ ಬಯಸುವ ಪಕ್ಷ: ವಿಜಯೇಂದ್ರ
WhatsApp Group Join Now
Telegram Group Join Now

ಬೆಂಗಳೂರು, 19 ಮಾರ್ಚ್: ರಾಜ್ಯ ಸರ್ಕಾರ ಹೇಳುವಂತೆ ಬಿಜೆಪಿ ಮುಸ್ಲಿಂ ಅಥವಾ ಅಲ್ಪಸಂಖ್ಯಾತ ವಿರೋಧಿ ಪಕ್ಷ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ಮುಸ್ಲಿಂ ಮಹಿಳೆಯರನ್ನು ನಿರಂತರವಾಗಿ ಶೋಷಣೆಗೆ ಗುರಿಮಾಡಿದ್ದ ಟ್ರಿಪಲ್ ತಲಾಖ್  ಕಾನೂನನ್ನು ರದ್ದು ಮಾಡಿ ಅವರನ್ನು ದೌರ್ಜನ್ಯಗಳಿಂದ ಮುಕ್ತ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಉಜ್ವಲ ಮತ್ತು ಇತರ ಹಲವಾರು ಯೋಜನೆಗಳು ಕೇವಲ ಹಿಂದೂ ಮಹಿಳೆಯರಿಗೆ ರೂಪಿಸಲಾಗಿಲ್ಲ ಎಂದರು.

ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಎಲ್ಲ ಧರ್ಮದ ಮಹಿಳೆಯರ ಅಭ್ಯುದಯಕ್ಕಾಗಿ ಜಾರಿ ಮಾಡಿದ್ದರು ಎಂದು ವಿಜಯೇಂದ್ರ ಹೇಳಿದರು.

WhatsApp Group Join Now
Telegram Group Join Now
Share This Article