ಬಿಜೆಪಿ  ಅಧಿಕಾರಕ್ಕೆ  ಬಂದಿರುವುದು ಮತಗಳ್ಳತನ ಮತ್ತು ಹಿಂಬಾಗಿಲ ಮೂಲಕ : ಶಾಸಕ ಭರತ್ ರೆಡ್ಡಿ ಆರೋಪ

Pratibha Boi
ಬಿಜೆಪಿ  ಅಧಿಕಾರಕ್ಕೆ  ಬಂದಿರುವುದು ಮತಗಳ್ಳತನ ಮತ್ತು ಹಿಂಬಾಗಿಲ ಮೂಲಕ : ಶಾಸಕ ಭರತ್ ರೆಡ್ಡಿ ಆರೋಪ
WhatsApp Group Join Now
Telegram Group Join Now
ಬಳ್ಳಾರಿ ಅ 7 : ಬಿಜೆಪಿ ಪಕ್ಷ ಕೇಂದ್ರದಲ್ಲಿ ಸತತವಾಗಿ ಮೂರು ಅವಧಿಗೆ ಅಧಿಕಾರಕ್ಕೆ ಬಂದಿರುವುದು ಮತಗಳ್ಳತನದಿಂದ ಹೊರತು ಮತದಾರರಿಂದಲ್ಲ ಎಂದು ನಗರ ಶಾಸಕ ಭರತ್ ರೆಡ್ಡಿ ಆರೋಪಿಸಿದರು.
 ಅವರು ಇಂದು ನಗರದ ರಾಯಲ್ ಸರ್ಕಲ್ ನಲ್ಲಿ ಬಿಜೆಪಿ ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿ, ಭಾರತೀಯ ಜನತಾ ಪಕ್ಷ ಯಾವತ್ತೂ ಸಹ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ ರಾಜ್ಯದಲ್ಲಾಗಲಿ ಮತ್ತು ಕೇಂದ್ರದಲ್ಲಿ ಆಗಲಿ ಮೋಸದ ಚುನಾವಣೆಯಿಂದಲೇ ಅಥವಾ ಹಿಂಬಾಗಿಲ ಮೂಲಕ ಅಧಿಕಾರವನ್ನು ಪಡೆದಿದ್ದಾರೆ ಹೊರತು ಪ್ರಮಾಣಿಕತೆಯ ಚುನಾವಣೆಯಿಂದಲ್ಲ ಎಂದು ಬಿಜೆಪಿ ಪಕ್ಷದ ವಿರುದ್ಧ ನಾರಾ ಭರತ್ ರೆಡ್ಡಿ ಕಿಡಿಗಾರಿದರು.
 ಬೆಂಗಳೂರು ನಗರದ ಮಹಾದೇವಪುರದಲ್ಲಿ ಒಂದೇ ಡೋರ್ ನಂಬರಲ್ಲಿ ಸುಮಾರು 80ಕ್ಕೂ ಹೆಚ್ಚು ಮತದಾರರ ನೋಂದಣಿ ಆಗಿರುತ್ತದೆ ಇದನ್ನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರದ ರಾಹುಲ್ ಗಾಂಧಿಯವರು ಬಯಲಿಗೆ ತಂದು ಸಾಕ್ಷಿ ಸಮೇತ ರುಜುವಾತು ಗೊಳಿಸಿದ್ದಾರೆ. ಇದನ್ನು ಮೀಡಿಯಾಗಳು ತನಿಖೆಗೆ ಒಳಪಡಿಸಿದಾಗ ಅದು ನಿಜವೆಂದು ಕಂಡು ಬಂದಿರುತ್ತದೆ ಆದರೂ ಸಹ ಇದನ್ನು ಬಿಜೆಪಿ ಸರ್ಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ ಇದರಿಂದ ನಾವು ಇಂದು ದೇಶಾದ್ಯಂತ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಎಂದರು.
   ಈ ಸಹಿ ಸಂಗ್ರಹ ಅಭಿಯಾನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂಪ್ರಶಾಂತ್, ಮುಲ್ಲಂಗಿ ನಂದೀಶ್,  ಮುಂಡರಗಿ ನಾಗರಾಜ್ ವಿಷ್ಣು ಬೋಯಪಾಠಿ, ಹುಮಾಯುನ್ ಖಾನ್, ವಿ.ಕೆ ಬಸಪ್ಪ, ಬೆಣಕಲ್ಲು ಬಸವರಾಜ, ಪರಶುರಾಮ್, ಮುದಿ ಮಲ್ಲಯ್ಯ, ತಿಮ್ಮಪ್ಪ
ಅಲ್ಲಾಭಕಾಶ್, ಮಾನಯ್ಯ ಪಾಲಿಕೆ ಸದಸ್ಯರಾದ ರಾಜೇಶ್ವರಿ, ಹೊನ್ನಪ್ಪ ಸೇರಿದಂತೆ  ಬೂತ್ ಮಟ್ಟದ ಅಧ್ಯಕ್ಷರು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿದ್ದರು.
WhatsApp Group Join Now
Telegram Group Join Now
Share This Article