ಬೆಳಗಾವಿ : ದೊಡ್ಡ ಹುದ್ದೆ ಕೊಟ್ರೆ ಕಂಡಿತ ಮತ್ತೆ ಬಿಜೆಪಿಗೆ ಹೋಗುವೆ. ರಾಜ್ಯದ ಸಿಎಂ ಆಗಬೇಕು ಎನ್ನುವ ಬಯಕೆ ನನಗೂ ಇದೆ. ಆದ್ದರಿಂದ ಸಿಎಂ ಕುರ್ಚಿ ನೀಡಿದರೆ ಕಂಡಿತ ಬಿಜೆಪಿ ಪಕ್ಷಕ್ಕೆ ಬರುವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಫೋಟಕ ಹೇಳಿಕೆ ನೀಡಿದರು.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ನನಗೆ ಬಿಜೆಪಿಗೆ ಮತ್ತೆ ಬರುವಂತೆ ಆಹ್ವಾನ ನೀಡಿದರು. ಆದರೆ, ನಾನು ಇದಕ್ಕೆ ಪ್ರತಿ ಉತ್ತರವಾಗಿ ನನಗೆ ಸಿಎಂ ಮಾಡ್ತಿನಿ ಅಂದ್ರೆ ಮಾತ್ರ ಬಿಜೆಪಿಗೆ ವಾಪಸ್ ಬಾರುವೆ ಎಂದು ಹೇಳಿದೆ ಎಂದು ಹೇಳಿದರು.
ನಮ್ಮ ಪಕ್ಷದ ಈಗಿನ ಪರಿಸ್ಥಿತಿ ಕೆಟ್ಟದ್ದು, ನಮ್ಮ ಪಕ್ಷದ ಕೆಲವು ಶಾಸಕರು ಡಿಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಸಿದ್ದರಾಮಯ್ಯ ಪರ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಹಿಂತಾ ಪರಿಸ್ಥಿತಿಯಲ್ಲಿ ನಮ್ಮ ಪಕ್ಷಕ್ಕೆ ನಿಮ್ಮಂತಹ ಉತ್ತಮ ನಾಯಕರ ಅವಶ್ಯಕತೆವಿದ್ದು, ಶ್ರೀಘ್ರವೇ ನಿಮ್ಮ ಪರ ಅಮಿತ್ ಶಾ ಬಳಿ ನಿಯೋಗ ಕರೆದುಕೊಂಡು ಹೋಗಿ ಮಾತನಾಡುವೆ. ನಿವು ಮತ್ತೆ ಬಿಜೆಪಿ ಪಕ್ಷಕ್ಕೆ ಬನ್ನಿ ಎಂದು ಆರ್. ಅಶೋಕ್ ನನಗೆ ಹೇಳಿದ್ದಾರೆ ಎಂದು ಯತ್ನಾಳ್ ತಿಳಿಸಿದರು.
ಡಿಕೆಶಿಯನ್ನ ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ:
ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದರು. ಆಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನ ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.


