ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನ ದಿನ ಆಚರಣೆ

Ravi Talawar
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನ ದಿನ ಆಚರಣೆ
WhatsApp Group Join Now
Telegram Group Join Now

ಗದಗ, ಏ.06:  ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನ ದಿನಚಾರಣೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಾಪನೆ ದಿನ ಆಚರಿಸಲಾಯಿತು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ ರವರು ಮಾತನಾಡುತ್ತ ೧೯೮೦ ಏಪ್ರಿಲ್ ೬ ರಲ್ಲಿ ಭಾರತೀಯ ಜನತಾ ಪಕ್ಷ ಅಂತಾ ಉದಯವಾಯಿತು ಅದಕ್ಕಿಂತ ಪೂರ್ವದಲ್ಲಿ ೧೯೫೧ ರಲ್ಲಿ ಜನಸಂಘವನ್ನು ಶ್ಯಾಮ್ ಪ್ರಸಾದ ಮುಖರ್ಜಿ ಹಾಗು ಪಂಡಿತ್ ದೀನ ದಯಾಳ ಉಪಾಧ್ಯಯರ ನೇತೃತ್ವದಲ್ಲಿ ಜನಸಂಘ
ಪ್ರಾರಂಭವಾಯಿತು. ೧೯೭೫ ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥೀತಿಯನ್ನ ಜಾರಿಗೆ ತಂದು ದೇಶದಲ್ಲಿರುವ ಎಲ್ಲ ವಿರೋಧ ಪಕ್ಷದ ದುರಿಣರನ್ನ ಜೇಲಿಗೆ ಕಳುಹಿಸಿ ಆಡಳಿತವನ್ನು ನಡೆಸಿದರು. ತುರ್ತು ಪರಿಸ್ಥೀತಿ ಹಿಂದೆ ಪಡೆದ ನಂತರ ಜಯಪ್ರಕಾಶ ನಾರಾಯಣ ರವರ
ನೇತೃತ್ವದಲ್ಲಿ ದೇಶದ ಎಲ್ಲ ರಾಜಕೀಯ ಪಕ್ಷಗಳು ಜನತಾ ಪಕ್ಷದಲ್ಲಿ ವಿಲಿನವಾದವು ಅದರಂತೆ ಜನಸಂಘವು ಕೂಡಾ ಜನತಾ ಪಕ್ಷದಲ್ಲಿ ವಿಲಿನವಾಯಿತು.

ನಂತರ ಜನತಾ ಪಕ್ಷದ ದಿಂದ  ಹೊರಬಂದ ಜನಸಂಘದ ನಾಯಕರುಗಳು ೧೯೮೦ ಏಪ್ರೀಲ್ ೬ ರಂದು ಭಾರತೀಯ ಜನತಾ ಪಾರ್ಟಿಯಾಗಿ ಉದಯವಾಯಿತು. ಅಲ್ಲಿಂದ ಇಲ್ಲಿಯ ವರೆಗೆ ಬಿಜೆಪಿ ಪಕ್ಷ ಹೆಮ್ಮರವಾಗಿ ಬೆಳೆದು ಕಳೆದ ೧೦ ವರ್ಷಗಳಿಂದ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಅದಕ್ಕು ಪೂರ್ವದಲ್ಲಿ ಅಟಲ್ ಬಿಹಾರಿ ವಾಜಪೇಯಿ ರವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರವನ್ನು ನಡೆಸಿದರು ಈ ರೀತಿಯಾಗಿ ಬಿಜೆಪಿ ಪಕ್ಷ ಬೆಳೆದು ಬಂದಿದೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಜಗನ್ನಾಥಸಾ ಭಾಂಡಗೆ, ರಾಜಕುಮಾರ ಬಸವಾ, ಪಕ್ಕಿರೇಶ ರಟ್ಟಿಹಳ್ಳಿ, ಅನೀಲ ಅಬ್ಬಿಗೇರಿ, ಕೆ.ಪಿ.ಕೋಟಿಗೌಡ್ರ, ರಾಜು ಹೊಂಗಲ, ಭದ್ರೇಶ ಕುಸ್ಲಾಪೂರ, ಬೂದಪ್ಪ ಹಳ್ಳಿ, ದ್ಯಾಮಣ್ಣ ನೀಲಗುಂದ, ಸಂತೋಷ ಅಕ್ಕಿ, ನಿಂಗಪ್ಪ ಹುಗ್ಗಿ, ಮಹಾದೇವಪ್ಪ ಚಿಂಚಲಿ, ರಮೇಶ ಮಜ್ಜಿಗುಡ್ಡ, ಸುಭಾಸ ಸುಂಕದ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥೀತರಿದ್ದರು.

 

 

WhatsApp Group Join Now
Telegram Group Join Now
Share This Article