ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ರೈತರು ಬೆಳೆದ ಹೆಸರು ಸಂಪೂರ್ಣವಾಗಿ ನಾಶವಾಗಿವೆ,ರೈತರು ಸಂಕಷ್ಟದಲ್ಲಿದ್ದಾರೆ ರೈತರೊಂದಿಗೆ ಹಾನಿಗೊಳಗಾದ ಬೆಳೆಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ವೀಕ್ಷಿಸಿದರು. ಈ ಸಂದರ್ಭದಲ್ಲಿ ರೈತರು ಮಾತನಾಡಿ ಇಲ್ಲಿಯವರೆಗೆ ಅಧಿಕಾರಿಗಳು ಶಾಸಕರು, ಸಚಿವರು ರೈತರ ಕಷ್ಟಗಳನ್ನು ಕೇಳಿಲ್ಲ ಕಾಂಗ್ರೆಸ್ ಎಂದು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿ ಸವದತ್ತಿ ಮಂಡಲ ಅದ್ಯಕ್ಷರಾದ ವಿರೂಪಾಕ್ಷ ಮಾಮನಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು