ಮಂಗಳೂರು, ಸೆ.19: ಮಂಗಳೂರು ಮಹಾನಗರ ಪಾಲಿಕೆಯ 25ನೇ ಅವಧಿಯ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಕೋಡಿಕಲ್ ಹಾಗೂ ಉಪಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ಭಾನುಮತಿ ಅವರು ಆಯ್ಕೆಯಾಗಿದ್ದಾರೆ. ಇನ್ನು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಗಿದ್ದ ಬೆನ್ನಲ್ಲೇ ಸಂಘರ್ಷ ಕೂಡ ಶುರುವಾಗಿದೆ. ಚುನಾವಣೆ ಬಳಿಕ ಪಾಲಿಕೆ ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಗದ್ದಲ ಶುರುವಾಗಿದೆ.
ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ನ ಒಬ್ಬರು ಸದಸ್ಯರು, 2 ಕಾಂಗ್ರೆಸ್ MLC ಗಳು ಗೈರಾಗಿದ್ದು ಉಪಮೇಯರ್ ಅಭ್ಯರ್ಥಿ ಬಿಜೆಪಿಯ ಭಾನುಮತಿಗೆ ಒಟ್ಟು 47 ಮತ ಹಾಗೂ ಕಾಂಗ್ರೆಸ್ ನ ಝೀನತ್ ಶಂಶುದ್ದೀನ್ ಗೆ 14 ಮತ ಬಂದಿದೆ. ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಭಾನುಮತಿಗೆ ಜಯ ಸಿಕ್ಕಿದೆ. ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಎಸ್ಸಿ) ಹಾಗೂ ಉಪ ಮೇಯರ್ಗೆ ಹಿಂದುಳಿದ ವರ್ಗ ಎ ಮೀಸಲಿಡಲಾಗಿತ್ತು. ಹಾಲಿ ಆಡಳಿತದ ಅವಧಿ ಐದುತಿಂಗಳು ಮಾತ್ರ ಆಗಿದೆ. ಈ ಬಾರಿ ಹಾಲಿ ಪಾಲಿಕೆ ಆಡಳಿತದ ಕೊನೆ ಅವಧಿಯ ಆಯ್ಕೆ ಇದಾಗಿದೆ.
ಇನ್ನು ಮತ್ತೊಂದೆಡೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಗಿದ್ದ ಬೆನ್ನಲ್ಲೇ ಸಂಘರ್ಷ ಶುರುವಾಗಿದೆ. ಪಾಲಿಕೆ ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರು ಕಿತ್ತಾಡಿಕೊಂಡಿದ್ದಾರೆ. ಮಾಜಿ ಮೇಯರ್ ಅಭಿನಂದನಾ ಭಾಷಣ ಸಂದರ್ಭ ನೂತನ ಮೇಯರ್- ಉಪಮೇಯರ್ ಗೆ ಅಭಿನಂದನೆ ಸಲ್ಲಿಸಲು ಕಾಂಗ್ರೆಸ್ ಸದಸ್ಯರು ತೆರಳಿದರು. ಭಾಷಣದ ಮಧ್ಯೆ ಎದ್ದು ಹೋಗಿದ್ದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ. ಪರಿಶಿಷ್ಟ ಜಾತಿಯ ಮೇಯರ್ ಅವರಿಗೆ ಅವಮಾನ ಮಾಡ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ನೂತನ ಮೇಯರ್-ಉಪಮೇಯರ್ ಗೆ ಅಭಿನಂದನೆ ವೇಳೆ ಮಾತಿನ ಚಕಮಕಿ ನಡೆದಿದ್ದು ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.