ಗದಗ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರವಾಸ

Ravi Talawar
ಗದಗ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರವಾಸ
WhatsApp Group Join Now
Telegram Group Join Now

ಗದಗ,ಏಪ್ರಿಲ್ 11:  ಹಾವೇರಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಸವರಾಜ ಬೊಮ್ಮಾಯಿರವರು, ಮಾಜಿ ಸಚಿವರು ಹಾಲಿ ಶಾಸಕರಾದ ಸಿ.ಸಿ.ಪಾಟೀಲ, ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಯುವ ದುರಿಣರಾದ ಅನೀಲ ಮೆಣಸಿನಕಾಯಿ ರವರು ಗದಗ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ದಿ, ೧೨/೦೪/೨೦೨೪ ಶುಕ್ರವಾರದಂದು ಗ್ರಾಮಗಳ ಪಕ್ಷದ ಪ್ರಮುಖರ ಹಾಗು ಕಾರ್ಯಕರ್ತರನ್ನು
ಭೇಟಿಯಾಗಲು ಬರುತ್ತಿದ್ದು ಬೆಳಿಗ್ಗೆ ೧೦ ಗಂಟೆಗೆ ಕುರ್ತಕೋಟಿ ಗ್ರಾಮದಲ್ಲಿ ರೋಡ್ ಶೋ, ಬೆ, ೧೧ ಗಂಟೆಗೆ ಸಾರ್ವಜನಿಕರ ಸಭೆ ಹರ್ತಿ ಗ್ರಾಮ, ಮ ೧೨ ಗಂಟೆಗೆ ಸಾರ್ವಜನಿಕರ ಸಭೆ ಕಣವಿ ಗ್ರಾಮ, ಮ ೧ ಗಂಟೆಗೆ ಸಾರ್ವಜನಿಕರ ಸಭೆ ಹೊಸೂರ ಗ್ರಾಮ, ಮ ೨ ಗಂಟೆಗೆ ಸಾರ್ವಜನಿಕರ ಸಭೆ ಶಿರುಂಧ ಗ್ರಾಮ, ಮ ೩ ಗಂಟೆಗೆ ರೋಡ್ ಶೋ ಸೊರಟೂರ ಗ್ರಾಮ, ಸ ೪ ಗಂಟೆಗೆ ಸಾರ್ವನಿಕರ ಸಭೆ ಬೆಳದಡಿ ತಾಂಡಾ ಹಾಗು ಗ್ರಾಮ, ಸ ೫ ಗಂಟೆಗೆ ನಾಗಾವಿ ತಾಂಡೆ ಹಾಗು ಗ್ರಾಮದಲ್ಲಿ ಸಾರ್ವಜನಿಕರ ಸಭೆ, ೬ ಗಂಟೆಗೆ ಮುಳಗುಂದದಲ್ಲಿ ಬೃಹತ್ ರೋಡ್ ಶೋ ಈ ಕಾರ್ಯಕ್ರಮಕ್ಕೆ ಆಯಾ ಭಾಗದ ಕಾರ್ಯಕರ್ತರು, ಪದಾಧಿಕಾರಿಗಳು, ಪಕ್ಷದ ಅಭಿಮಾನಿಗಳು, ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಬಿಜೆಪಿ ವಕ್ತಾರರಾದ
ಎಂ.ಎಂ.ಹಿರೇಮಠರವರು ವಿನಂತಿಸಿರುವರು.

WhatsApp Group Join Now
Telegram Group Join Now
Share This Article