ಬೆಳೆ ಪರಿಹಾರ ನೀಡುವಂತೆ ಬಿಜೆಪಿ ಮನವಿ

Ravi Talawar
ಬೆಳೆ ಪರಿಹಾರ ನೀಡುವಂತೆ ಬಿಜೆಪಿ ಮನವಿ
WhatsApp Group Join Now
Telegram Group Join Now

ಗದಗ,21: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಬರ ಪರಿಹಾರವನ್ನು ಜಿಲ್ಲೆಯ ಎಲ್ಲ ರೈತರಿಗೆ ಸಮರ್ಪಕವಾಗಿ ನೀಡುವಂತೆ ಬಿಜೆಪಿ ಗದಗ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಬಸವರಾಜ ಇಟಗಿ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ೨೦೨೩- ೨೪ ನೇ ಸಾಲಿನ ಮುಂಗಾರಿನ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ
೨೦೦೦ ರೂ ಗಳನ್ನ ರಾಜ್ಯದ ರೈತರಿಗೆ ನೀಡಿತ್ತು.

ಕೇಂದ್ರ ಸರ್ಕಾರವು ಬರ ಪರಿಹಾರ ೩೪೫೪ ಕೋಟಿ ರೂ ಗಳನ್ನ ರಾಜ್ಯದ ರೈತರ ಖಾತೆಗೆ ಬಿಡುಗಡೆ ಮಾಡುತ್ತಿದ್ದಂvಯೇ ರಾಜ್ಯ ಮುಂಗಡವಾಗಿ ಕೊಟ್ಟಿದ್ದ ೨ ಸಾವಿರ ಹಣವನ್ನು ಕಟಾಯಿಸಿ ಉಳಿದ ಮೊತ್ತವನ್ನು ಜಮೆ ಮಾಡಿ ರಾಜ್ಯ ರೈತರಿಗೆ ಕಾಂಗ್ರೇಸ್ ಅನ್ಯಾಯ ಮಾಡುತ್ತಿದ್ದೆ. ಈ ಮಾಹಿತಿ ಅರಿಯದ ರೈತರು ಕೇಂದ್ರದಿಂದ ಪರಿಹಾರ ಪೂರ್ಣ ಸಿಕ್ಕಿಲ್ಲವೆಂದು ಗೊಂದಲದಲ್ಲಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸ್ವಾತಂತ್ರ್ಯ್ರ ಸುವರ್ಣ ಮಹೋತ್ಸವದ ನೆನಪಿಗಾಗಿ ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಘೋಷಣೆ ಮಾಡಿ ೪೯೦ ರೈತ ಉತ್ಪಾದಕ ಸಂಸ್ಥೆಗಳು ರಚನೆಯಾಗಿದ್ದು ಎಲ್ಲ ರೈತ ಉತ್ಪಾದಕ ಸಂಸ್ಥೆಗಳಿಗೆ ೧೫೦ ಕೋಟಿ ರೂಪಾಯಿಗಳನ್ನು ಮಿಸಲಿಟ್ಟಿದ್ದು, ಈಗಿನ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿರುವ ಯಾವುದೇ ರೈತ ಉತ್ಪಾದಕ ಸಂಸ್ಥೆಗಳಿಗೆ ೧ ರೂಪಾಯಿ ಸಹಿತ ಬಿಡುಗಡೆ ಮಾಡಿರುವುದಿಲ್ಲಾ. ರೈತರಿಗೆ ಬರ ಪರಿಹಾರ ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಜಿಲ್ಲಾದ್ಯಾಂತ ರೈತ ವಿರೋಧಿ ಕಾಂಗ್ರೇಸ್ ಸರ್ಕಾರದ ನೀತಿಯ ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವದು ಎಂದು ಬಿಜೆಪಿ ರೈತ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ ರವರು ಸರ್ಕಾರಕ್ಕೆ ಎಚ್ಚರಿಕೆ
ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ವಕ್ಕ್ಕರ, ಮುತ್ತಣ್ಣ ಮೂಲಿಮನಿ, ಅಶೋಕ ಕುಡತಿನಿ, ಸಿದ್ದಪ್ಪ ಜೊಂಡಿ, ಆರ್.ಬಿ.ಕುಲಕರ್ಣಿ, ಸಿದ್ದಪ್ಪ ಈರಗಾರ, ಸತೀಶ ಗಿಡ್ಡಹನಮಣ್ಣವರ, ಸೋಮಶೇಖರ ಹಿರೇಮಠ, ಕಳಕಪ್ಪ
ಕುರಹಟ್ಟಿ, ಶಂಕರ ಕರಿಬಿಷ್ಠಿ, ಕಳಕಪ್ಪ ಕುಂಬಾರ, ಅಶೋಕ ಸೂರಣಗಿ, ಈರಣ್ಣ ಅಂಗಡಿ, ಮಹೇಶ ಕಮ್ಮಾರ, ಚನವೀರಪ್ಪ ಹೂಗಾರ, ಬಸನಗೌಡ ಪಾಟೀಲ ಹಾಗೂ ಇನ್ನೂ ಹಲವಾರು ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು, ಮುಖಂಡರುಗಳು ಉಪಸ್ಥೀತರಿದ್ದರು.

WhatsApp Group Join Now
Telegram Group Join Now
Share This Article