ಧಾರವಾಡ: ಸದ್ಯ ಭಾರತ ಮತ್ತು ಪಾಕ್ ಗಡಿಯಲ್ಲಿ ಯುದ್ಧದ ಸನ್ನಿವೇಶ ಏರ್ಪಟ್ಟಿದೆ. ಭಾರತೀಯ ಸೈನಿಕರು ಪಾಕಿಸ್ತಾನದ ಒಳಗಡೆ ನುಗ್ಗಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿ ಅನೇಕ ಉಗ್ರರನ್ನು ಸೆದೆಬಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾರತೀಯ ಸೈನಿಕರ ಹೆಸರಿನಲ್ಲಿ ಧಾರವಾಡದ ಲೈನ್ ಬಜಾರ್ ಆಂಜನೇಯನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ವೇಳೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಭಾರತೀಯ ಸೇನೆಯ ಮುಖ್ಯಸ್ಥರು ಮತ್ತು ಸೈನಿಕರ ಭಾವಚಿತ್ರ ಹಿಡಿದ ಘೋಷಣೆ ಹಾಕಿದರು. ಭಾರತೀಯ ಸೈನಿಕರು ಯಶಸ್ವಿಯಾಗಿ ಪಾಕ್ ಉಗ್ರರನ್ನು ಸೆದೆಬಡಿಯಲಿ. ಭಾರತೀಯ ಸೈನಿಕರಿಗೆ ಪವನಸುತ ಹನುಮಂತ ವಿಶೇಷ ಶಕ್ತಿ ಕೊಡಲಿ ಆಪರೇಶನ್ ಸಿಂಧೂರ ಯಶಸ್ವಿಯಾಗಲಿ ಎಂದು ಬಿಜೆಪಿ ಕಾರ್ಯಕರ್ತರು ಹಾರೈಸಿದರು.