ಬೈಲಹೊಂಗಲ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲದಲ್ಲಿ ಅಲ್ಲಿನ ಬಿಸಿಯುಟ ಎಂದರೆ ಕಳಪೆ ಮಟ್ಟ ಎಂಬ ದೂರುಗಳ ನಡುವೆ ಸಮೀಪದ ಕೊರವಿನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ಶನಿವಾರ ತರತರಹದ ತಿಂಡಿಗಳನ್ನು ಮಾಡುತ್ತಾ ಹಾಗೂ ಪ್ರತಿದಿನ ಗುಣಮಟ್ಟದ ಆಹಾರ ಮತ್ತು ಉತ್ತಮ ಶಿಕ್ಷಣವನ್ನು ನೀಡುತ್ತಾ ಹೆಸರುವಾಸಿಯಾಗಿದೆ. ಶನಿವಾರದಂದು ವಿದ್ಯಾರ್ಥಿಗಳಿಗೆ ಇಡ್ಲಿ ಮತ್ತು ಬಾಳೆಹಣ್ಣು ಮಾಡುವುದರ ಮೂಲಕ ಶಾಲಾ ಮಕ್ಕಳು ಖುಷಿಯಾಗಿ ಇಡ್ಲಿ ಸಾಂಬಾರ ಮತ್ತು ಬಾಳೆಹಣ್ಣು ಸೇವಿಸುವದರೊಂದಿಗೆ ಹೊಸ ಸಮವಸ್ತ್ರ ಧರಿಸಿ ಪಾಲಕರ ಗಮನ ಸೆಳೆದರು.
ಶಾಲಾ ಮುಖ್ಯೋಪಾಧ್ಯಾಯ ಬಿ.ಆಯ್.ಬಾಳಿಕಾಯಿ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ದಿನನಿತ್ಯ ರುಚಿಕರ ಅಡುಗೆ ಮಾಡುವ ಸಿಬ್ಬಂದಿಯ ಕಾರ್ಯವನ್ನು ಪಾಲಕರು ಹಾಗೂ ವಿದ್ಯಾರ್ಥಿಗಳು ಕೊಂಡಾಡಿದ್ದಾರೆ.