ನೇಸರಗಿ. ಜನ್ಮದಿನದ ಆಚರಣೆ ಆಡಂಬರ ಆಡಂಬರ ಆಗದೆ ಅರ್ಥಪೂರ್ಣ ಆಚರಣೆ ಆಗಬೇಕು ಅದರಿಂದ ಬೇರೆಯವರಿಗೆ ಸಹಕಾರ ಆಗಬೇಕು ಒಳ್ಳೆಯ ಸಂದೇಶ ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ ನಮ್ಮ ಅಭಿಮಾನಿಗಳು, ಕಾರ್ಯಕರ್ತರು ಸ್ವಂತ ಖರ್ಚಿನಿಂದ 12000 ನೋಟ್ಸ್ ಬುಕ್ ಮತ್ತು ಪೆನ್ನು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಂದು ಸಸಿ ನೀಡುವ ಮುಖಾಂತರ ನನ್ನ ಜನ್ಮದಿನಕ್ಕೆ ಮೆರಗು ಬಂದಿದೆ ಎಂದು ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸೋಮವಾರದಂದು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕರ ಜನ್ಮದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೋಟ್ಸ್ ಬುಕ್, ಪೆನ್ನು, ಸಸಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬರೂ ಸಸಿ ನೆಟ್ಟು ಮರ ಬೆಳೆಸಿ, ದೇಶದ ಪರಿಸರ ಉಳಿಸಿ ಎಂದರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಸಚಿನ ಪಾಟೀಲ,ನೇಸರಗಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಆಡಿವಪ್ಪ ಮಾಳನ್ನವರ, ಮಂಜುನಾಥ್ ಹುಲಮನಿ, ಪ್ರಾಂಶುಪಾಲರಾದ ಫಕ್ಕಿರಗೌಡ ಗದ್ದಿಗೌಡರ, ಅಶೋಕ ಹತ್ತರಕಿ,ದೀಪಕಗೌಡ ಪಾಟೀಲ, ಬಾಳಪ್ಪ ಮಾಳಗಿ, ಬರಮಣ್ಣ ಸತ್ತೇನ್ನವರ, ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡರ,ಮಲ್ಲಿಕಾರ್ಜುನ ಕಲ್ಲೋಳಿ,ಸುರೇಶ ಅಗಸಿಮನಿ, ಸುರೇಶ ಲೆಂಕನಟ್ಟಿ, ಯಮನಪ್ಪ ಪೂಜೇರಿ,ಚನಗೌಡ ಪಾಟೀಲ, ಶಿವನಪ್ಪ ಮಾದೇನ್ನವರ, ನಜೀರ ತಹಸೀಲ್ದಾರ, ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶಾಸಕರ ಅಭಿಮಾನಿಗಳು, ಕಾರ್ಯಕರ್ತರು, ಭೋಧಕ, ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.