ಘಟಪ್ರಭಾ.: ಇಲ್ಲಿನ ಸುಪ್ರಸಿದ್ದ ಘಟಪ್ರಭಾ ನದಿ ಹತ್ತಿರ ಇರುವ ಪುಣ್ಯ ಕ್ಷೇತ್ರ ಗುಬ್ಬಲಗುಡ್ಡ ಶ್ರೀ ಕೆಂಪಯ್ಯಸ್ವಾಮಿ ಮಠದ ಪರಮಪೂಜ್ಯ ಡಾ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ 41 ನೇ ಹುಟ್ಟುಹಬ್ಬದ ಪ್ರಯುಕ್ತ ಕೆಂಪಯ್ಯಸ್ವಾಮಿ ಮಠದ ಶ್ರೀ ಮೃತ್ಯುಂಜಯ ಸಾಂಸ್ಕೃತಿಕ ಭವನದಲ್ಲಿ ಭಕ್ತರ ಹಾಗೂ ಕೆ ಎಲ್ ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ, ಘಟಪ್ರಭಾ ಜೆ ಜಿ ಸಹಕಾರಿ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಬೆಳಗಾವಿ, ತಾಲೂಕಾ ಆಸ್ಪತ್ರೆ ಗೋಕಾಕ, ಗೋಕಾಕ ರೋಟರಿ ಕ್ಲಬ ಮತ್ತು ಘಟಪ್ರಭಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಐಚ್ಚಿಕ್ ರಕ್ತದಾನ ಶಿಬಿರ, ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.

ಬೆಳಿಗ್ಗೆನಿಂದಲೇ ಈ ಭಾಗದ ಜನರು ಸರದಿ ಸಾಲಿನಲ್ಲಿ ನಿಂತು ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತವಾಗಿ ಅರೋಗ್ಯ ತಪಾಸಣೆ ಮಾಡಿಸಿಕೊಂಡು ಶೀಗಳನ್ನು ಬೇಟಿ ಮಾಡಿ ಜನ್ಮದಿನದ ಶುಭ ಕೋರಿ, ಆಶೀರ್ವಾದ ಪಡೆದರು.ಬೆಳಿಗ್ಗೆ 10-00 ಘಂಟೆಗೆ ರೋಟರಿ ಕ್ಲಬ್ ಸಹಯೋಗದಲ್ಲಿ ರಕ್ತದಾನ ಶಿಬಿರ ಪ್ರಾರಂಭವಾಗಿ ಅನೇಕರು ಭಕ್ತಿ ಭಾವದಿಂದ ರಕ್ತದಾನ ಮಾಡಿದರು. ಈ ಇಂದು ರಕ್ತದಾನ ಶಿಬಿರದಲ್ಲಿ ಬಡವ, ಬಲಿದ ಎನ್ನದೆ ಶ್ರದ್ದಾ ಪೂರ್ವಕವಾಗಿ ಎಲ್ಲರೂ ರಕ್ತದಾನ ಮಾಡಿದರು.

ಬೆಳಿಗ್ಗೆ 7-00 ಘಂಟೆಯಿಂದ ಭಕ್ತರ ದಂದು ಶ್ರೀ ಮಠಕ್ಕೆ ಶ್ರೀಗಳ ಜನ್ಮದಿನದ ಶುಭಕೋರಲು ಮತ್ತು ಶ್ರೀಗಳ ಆಶೀರ್ವಾದ ಪಡೆಯಲು ಸಾಗರೋಪಾದಿಯಲ್ಲಿ ಹರಿದು ಬಂತು. ಈ ಒಂದು ವಿನೂತನ ಜನ್ಮ ದಿನದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಪದ್ದತಿಯನ್ನು ಶ್ರೀಗಳು ನಿರಾಕರಿಸಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಟೆನಿಸ ಕೃಷ್ಣ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಶ್ರೀಗಳಿಗೆ ಜನ್ಮ ದಿನದ ಶುಭ ಕೋರಿದರು. ನಾಡಿನ ಅನೇಕ ಹರ, ಗುರು, ಚರ ಮೂರ್ತಿಗಳು, ಮಹಾಸ್ವಾಮಿಗಳು, ರಾಜಕೀಯ ಮುಖಂಡರು, ರೈತ ಮುಖಂಡರು, ಗೋಕಾಕ ತಾಲೂಕಿನ ರಾಜಕೀಯ ಮುಖಂಡರು, ಘಟಪ್ರಭಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಡಾ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ 41 ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

. ಈ ಸಂದರ್ಭದಲ್ಲಿ ಜೆ ಜಿ ಕೋ ಆಸ್ಪತ್ರೆಯ ಅಧ್ಯಕ್ಷರಾದ ಅಪ್ಪಯ್ಯಪ್ಪ ಬಡಕುಂದ್ರಿ,ಮುಖಂಡ ಡಿ ಎಮ್ ದಳವಾಯಿ, ಕೆ ಆರ್ ಹೆಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಹುಕ್ಕೇರಿ,ಮಲ್ಲಾಪೂರ ಅರ್ಬನ್ ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ , ವಕೀರರಾದ ಗಂಗಾಧರ ಬಡಕುಂದ್ರಿ,ಮಲ್ಲಾಪುರ ಪಿ ಕೆ ಪಿ ಎಸ್ಅಧ್ಯಕ್ಷ ಮುತ್ತಣ್ಣ ಹತ್ತರವಾಟ, ಜೆ ಜಿ ಕೋ ಸಹಕಾರ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಡಾ. ಬಿ ಕೆ ಎಚ್ ಪಾಟೀಲ, ಉದ್ಯಮಿ ಜಯಶೀಲ ಶೆಟ್ಟಿ, ಗುರುಬಸಯ್ಯ ಕರ್ಪೂರಮಠ,ಸಿ ಎ ಕಾಡದವರ, ಕುಮಾರ ಕರ್ಪೂರಮಠ, ಮಾರುತಿ ವಿಜಯನಗರ,ಮಹಾಂತೇಶ್ ತಾಂವಸಿ,ಮಲ್ಲಪ್ಪ ಕಮತ, ಮಲ್ಲಿಕಾರ್ಜುನ ತುಕ್ಕಾನಟ್ಟಿ , ಈರಪ್ಪ ಕಮತ, ಹೊನ್ನಜ್ಜ ಕೋಳಿ, ಜಯಪ್ರಕಾಶ ಕಾಡದವರ,, ರಾಮಪ್ಪ ತುಕ್ಕಾನಟ್ಟಿ, ಉಮೇಶ ತುಕ್ಕನಟ್ಟಿ, ನಾಗರಾಜ್ ಚೌಕಶಿ,ಗಣೇಶ ಗಾಣಿಗ,ಚನ್ನಬಸ್ಸು ಅಂಗಡಿ, ಸಚಿನ ಕಡಬಡಿ, ಶಂಕರಲಿಂಗ ಅಂತರಗಂಗಿ,ಪ್ರವೀಣ್ ಮಟಗಾರ, ಶ್ರೀಕಾಂತ ಮಹಾಜನ, ಅರುಣ ಶೆಟ್ಟಿ, ಈರಣ್ಣ ಅಕ್ಕಿವಾಟ,ಕಾಡಪ್ಪ ಕರೋಶಿ, ಅಶೋಕ ಮುಂಗರವಾಡಿ, ಬಾಲಕೃಷ್ಣ ಕಾಪ್ಸಿಕರ, ವಿಲಾಸ ಗಾಯಕವಾಡ,ಪ್ರಭುಲಿಂಗ ಅಂತರಗಂಗಿ, ಜೆ ಜಿ ಕೋ ಆಸ್ಪತ್ರೆಯ ಆಡಳಿತ ಮಂಡಳಿ, ಡಾ. ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆಯ, ಶಿಕ್ಷಕರ ವೃಂದ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಹೆಸ್ಕಾಂ ಇಲಾಖೆ, ಅನೇಕ ಇಲಾಖೆಗಳ ಅಧಿಕಾರಿಗಳು, ಅನೇಕ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಪಟ್ಟಣ ಪಂಚಾಯತ ಅಧಿಕಾರಿಗಳು, ಆಯಾ ಸಂಸ್ಥೆಗಳ ಸಿಬ್ಬಂದಿ, ಈ ಭಾಗದ ರೈತರು, ಎಲ್ಲ ಜಾತಿ ಜನಾಂಗದ ನಾಯಕರು, ಎಲ್ಲ ಸಮಾಜದ ಜನಾಂಗ ಭಾಗವಹಿಸಿ, ಶ್ರೀಗಳಿಗೆ ಶುಭ ಕೋರಿ, ಆಶೀರ್ವಾದ ಪಡೆದು, ರಕ್ತದಾನ ಮಾಡಿ, ಸಹಸ್ರಾರು ಜನ ಉಚಿತ ಅರೋಗ್ಯ ತಪಾಸಣೆ ಮಾಡಿಕೊಂಡು ಪರಮಪೂಜ್ಯ ಡಾ.ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ 41 ನೇ ಜನ್ಮ ದಿನವನ್ನು ವಿಶಿಷ್ಟ ಹಾಗೂ ವಿನೂತನ ರೀತಿಯಲ್ಲಿ ಆಚರಿಸಿ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.
