ಬೆಳಗಾವಿ.ಶಿವಸೇನೆ ಪಕ್ಷದ ಮರೆಯಲಾರದ ಮಾಣಿಕ್ಯ, ಹಿಂದುತ್ವ ಎದೆಗಾರಿಕೆಯ ಮಹಾ ನಾಯಕ ದಿ. ಬಾಳಸಾಹೇಬ ಠಾಕ್ರೆ ರವರ ಜನ್ಮದಿನದ ಪ್ರಯುಕ್ತ ಶಿವಸೇನೆ ಕರ್ನಾಟಕ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಹಿರೇಮಠ ಹಾಗೂ ಜಿಲ್ಲಾ ಘಟಕದ ಸದಸ್ಯರು ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿ ದಿ. ಬಾಳಾಸಾಹೇಬ ಠಾಕ್ರೆ ಅವರ ಹೆಸರಿನಲ್ಲಿ ಪೂಜೆ ಅರ್ಚನೆ ಮಾಡಿಸಿ ಸಿಹಿ ಹಂಚಿ ಜನ್ಮದಿನವನ್ನು ಆಚರಿಸಲಾಯಿತು. ಇದೆ ಸಂದರ್ಭದಲ್ಲಿ ಶಿವಾನಂದ ಹಿರೇಮಠ ಮಾತನಾಡಿ ಕಾಶ್ಮೀರ ಪಂಡಿತರನ್ನು ಕಾಶ್ಮೀರದಿಂದ ಓಡಿಸಿ ಅವರೆಲ್ಲ ನಿರಾಶ್ರಿತರನ್ನಾಗಿಸಿದ ಸಮಯ ಬಾಳಾಸಾಹೇಬರು ಕಾಶ್ಮೀರ ಪಂಡಿತರಿಗೆ ಆಶ್ರಯ ನೀಡಿದ್ದು ಪ್ರತಿಯೊಬ್ಬ ಹಿಂದೂ ಮರೆತಿಲ್ಲ ಅದರ ಮುಂದುವರೆದ ಭಾಗವಾಗಿ ಶಿವಸೇನೆ ಕರ್ನಾಟಕದ ಪ್ರಮುಖರು ಮೊನ್ನೆ ಜಮ್ಮು ಕಾಶ್ಮೀರ ಪ್ರವಾಸ ಮಾಡಿ ಕ್ಯಾಂಪಗಳಲ್ಲಿ ನಿರಾಶ್ರಿತ ಪಂಡಿತರನ್ನು ಭೆಟ್ಟಿ ಮಾಡಿ ಪರಿಸ್ಥಿತಿ ಕಣ್ಣಾರೆ ನೋಡಿ ಮರುಗಿದ ಅವರು ನ್ಯಾಯ ಸಿಗುವವರೆಗೂ ವಿಶ್ರಮಿಸುವುದಿಲ್ಲ ಅನ್ನುವ ಸ್ಪಷ್ಟ ಸಂದೇಶ ನೀಡಿದ್ದಾರೆಂದು ತಿಳಿಸಿದರು.


