ಬೈಲಹೊಂಗಲ. ನಾಡಿನ ಸಮಸ್ತ ದೇಶಾಭಿಮಾನಿಗಳ ಪರವಾಗಿ ತಮ್ಮಲ್ಲಿ ವಿನಂತಿ ಏನೆಂದರೆ,ಸೂರ್ಯಮುಳಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟಿಷ್ ರಿಗೆ ಪ್ರಪಂಚದಲ್ಲಿ ಮೊಟ್ಟಮೊದಲಿಗೆ ಸೋಲಿನ ರುಚಿ ತೊರಿಸಿದ್ದ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಷ್ಟ್ರಮಾತೆ ವೀರರಾಣಿ ಕಿತ್ತೂರ ಚನ್ನಮ್ಮನನವರ ಕಿತ್ತೂರು ಕೋಟೆ, ಜನ್ಮಸ್ಥಳ ಕಾಕತಿ, ಐಕ್ಯಸ್ಥಾನ ಬೈಲಹೊಂಗಲ ಸೇರಿದಂತೆ ಸುಮಾರು 30ಸ್ಥಳಗಳ ಅಭಿವೃದ್ಧಿಗಾಗಿ 17ವರ್ಷಗಳ ಹಿಂದೆ ಸ್ಥಾಪನೆಯಾದ,*ಕಿತ್ತೂರು ಪ್ರಾಧಿಕಾರಕ್ಕೆ ಈ ವರ್ಷದ ಬಜೆಟ್ ದಲ್ಲಿ ಬಿಡಿಗಾಸು ನೀಡಿದ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೆವೆ.
17ವರ್ಷಗಳಲ್ಲಿ ಯಾವುದೆ ಅಭಿವೃದ್ಧಿ ಪರವಾದ ಕಾರ್ಯಗಳನ್ನು ಕಾಣದೆ ಆಮೆಗತಿಯಲ್ಲಿ ಹತ್ತುವರ್ಷಗಳಿಂದ ಒಂದೆ ಒಂದುಕಾರ್ಯ ಪೂರ್ಣಗೊಂಡಿಲ್ಲ. 17 ವರ್ಷದಿಂದ ಪ್ರಾಧಿಕಾರಕ್ಕೆ 43ಕೋಟಿ 75 ಲಕ್ಷ ರೂಪಾಯಿ ಅನುದಾನ ನೀಡಿದ ಸರ್ಕಾರಗಳು 9ವರ್ಷದ ಪ್ರಾಧಿಕಾರಕ್ಕೆ 350ಕೋಟಿ ಹಣ ನೀಡಿದ್ದಿರಿ ಇದು ಸ್ವಾಗತಾರ್ಹ. ಆದರೆ ತಾಯಿಯ ಸ್ಥಾನದಲ್ಲಿದ್ದು ಸರ್ವಸ್ವವನ್ನೂ ತನ್ನ ಪ್ರಜೆಗಳಿಗಾಗಿ ದಾರೆ ಎರೆದು ಪ್ರಾಣ ತ್ಯಾಗಮಾಡಿದ ವೀರರಾಣಿ ಚನ್ನಮ್ಮ ಪ್ರಾಧಿಕಾರದ ಬಗ್ಗೆ ಅಸಡ್ಡೆ ತೊರುವದಲ್ಲದೆ ಈ ಬಜೆಟ್ ನಲ್ಲಿ ಒಂದು ಪೈಸೆ ಅನುದಾನ ನೀಡದ ನಿಮ್ಮ ನೀಚ ಬುದ್ದಿಯನ್ನು ಉಗ್ರವಾಗಿ ಖಂಡಿಸುತ್ತೆವೆ.
ಸರ್ಕರದ ಈ ಕ್ರಮದಿಂದ ವೀರರಾಣಿ ಚನ್ನಮ್ಮನವರ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಿರಿ. ಅಂದು ಬ್ರಿಟೀಷರಿಂದ ಪಡಬಾರದ ಕಷ್ಟ ಅನುಭವಿಸಿದ ತಾಯಿ ಚನ್ನಮ್ಮನವರಿಗೆ ಇಂದಿನ ಪ್ರಜಾಪ್ರಭುತ್ವ ಸರ್ಕಾರ ಬ್ರೀಟಿಷ್ ಸರ್ಕಾರದಂತೆ ನಡೆದುಕೊಳ್ಳುತ್ತಿರುವದು ರಾಷ್ಟ್ರಮಾತೆಗೆ ತೋರಿದ ಅಗೌರವ. ಜನ್ಮಭೂಮಿ ಕಾಕತಿಯಲ್ಲಿ ಚನ್ನಮ್ಮನ ಮೂರ್ತಿಯೊಂದನ್ನು ಬಿಟ್ಟರೆ ಅವರ ಜನ್ಮಸ್ಥಾನದಲ್ಲಿ ಒಂದೆ ಒಂದು ಅಭಿವೃದ್ಧಿ ಇಲ್ಲಾ. ಕಿತ್ತೂರು ಉತ್ಸವ ಒಂದನ್ನು ಬಿಟ್ಟರೆ ಕೋಟೆಯ ರಕ್ಷಣೆಯಾಗಲಿ ಇನ್ನುವರೆಗೆ ನಡೆದಿಲ್ಲ. ಐಕ್ಯಸ್ಥಾನ ಬೈಲಹೊಂಗಲದಲ್ಲಿ ಕಳೆದ 10ವರ್ಷದಿಂದ ಆಮೆಗತಿಯಲ್ಲಿ ಅಲ್ಪಸ್ವಲ್ಪ ಕಾರ್ಯ ನಡೆದಿದ್ದು ಇನ್ನು ವರೆಗೆ ಯಾವದು ಅಂತಹ ಕಾರ್ಯ ನಡೆಯದಿರುವದು ಈ ಭಾಗದ ದುರ್ಧೈವ ಸಂಗತಿ.
ತಕ್ಷಣ ಸರ್ಕಾರ ಕಿತ್ತೂರು ಪ್ರಾಧಿಕಾರಕ್ಕೆ ಕನಿಷ್ಠ 200ಕೋಟಿ ಅನುದಾನ ನೀಡಬೇಕು. ಚನ್ನಮ್ಮನ ಐಕ್ಯಸ್ಥಾನ ಬೈಲಹೊಂಗಲದಲ್ಲಿ ಅಂತರಾಷ್ಟ್ರೀಯ ಬಾಲಕಿಯರ ಸೈನಿಕ ಶಾಲೆ ತೆರೆಯಬೇಕು. ಕಿತ್ತೂರ ಮತ್ತು ಬೈಲಹೊಂಗಲದಲ್ಲಿ ಚನ್ನಮ್ಮನ ವೀರ ಜೀವನದ ರಾಕ್ ಗಾರ್ಡನ್ ಕನಿಷ್ಠ ನೂರುಕೋಟಿ ರೂಪಾಯಿಗಳಲ್ಲಿ ನೂರಾರೂ ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಬೇಕು.
ಕಿತ್ತೂರು ಕೋಟೆಯನ್ನು ಮರು ಸೃಷ್ಟಿಸುವದು ಹೇಳಿಕೆಯಾಗದೆ ಕಾರ್ಯಪ್ರವರ್ತರಾಗಬೇಕು. ಪ್ರಾಧೀಕಾರದಲ್ಲಿ ಹೇಳಿದ ಮರಡಿ ದಿಬ್ಬ, ಕಲ್ಮಠ,ನಿಚ್ಚನಕಿ ಸೇರಿದಂತೆ 30ಸ್ಥಳಗಳ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದರೆ ಈ ತಿಂಗಳ 18 ರಂದು ಬೈಲಹೊಂಗಲ ಪಟ್ಟಣವನ್ನು ಎಲ್ಲ ಮಠಾಧೀಶರ ನೇತೃತ್ವದಲ್ಲಿ ವೀರರಾಣಿ ಚನ್ನಮ್ಮನವರ ಅಭಿಮಾನಿಗಳು ಬಂದ ಮಾಡಿ ಅಕ್ರೋಶ ವ್ಯಕ್ತಪಡಿಸಬೇಕಾದಿತು ಎಂದು ತಮಗೆ ಎಚ್ಷರಿಕೆ ನೀಡುತ್ತೆವೆ ಎಂದು ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ನವರ ಸ್ಮಾರಕೋತ್ಸವ ಸಮಿತಿ ಬೈಲಹೊಂಗಲ ವತಿಯಿಂದ ಉಪ ವಿಭಾಗಾಧಿಕಾರಿಗಳ ಮುಖಾಂತರ ಸಿ ಎಮ್ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಅದಕ್ಕಿಂತ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಹಾಗೂ ನಗರದ ಎಲ್ಲ ಮುಖಂಡರ ಸಮ್ಮುಖದಲ್ಲಿ ಹೊಸದಾಗಿ ರಚಿಸಲಾದ ಅಭಿವೃದ್ಧಿ ಪ್ರಾಧಿಕಾರಕ್ಕೆ 450 ಕೋಟಿ ರೂ ಅನುಧಾನ ನೀಡಲಾಗಿದೆ ಆದರೆ ಅನೇಕ ವರ್ಷ ಇತಿಹಾಸ ಹೊಂದಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬೀಡಿಗಾಸು ನೀಡದ ಕ್ರಮಕ್ಕೆ ವ್ಯಾಪಾಕ ಆಕ್ರೋಶ ವ್ಯಕ್ತಪಡಿಸಿ ಕಿತ್ತೂರು ಹಾಗೂ ಬೈಲಹೊಂಗಲದಲ್ಲಿ ಮಾರ್ಚ್ 18 ರಂದು ಸಂಪೂರ್ಣ ಬಂದ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ವ್ಹಿ ಆಯ ಪಾಟೀಲ, ಶಂಕರ ಮಾಡಲಗಿ, ಎಫ್ ಎಸ್ ಸಿದ್ದನಗೌಡರ, ವಿಜಯ ಮೆಟಗುಡ, ಮಲ್ಲಿಕಾರ್ಜುನ ಸೋಮಣ್ಣವರ, ಗುರು ಮೆಟಗುಡ, ಶ್ರೀ ಮಹಾಂತೇಶ ಶಾಸ್ತ್ರೀ ಆರಾದ್ರಿಮಠ, ಶ್ರೀಶೈಲ ಬೋಳನ್ನವರ, ಬಸವರಾಜ ಜನ್ಮಟ್ಟಿ, ಮಹೇಶ ಹರಕುಣಿ,ಶ್ರೀಕಾಂತ ಶಿರಹಟ್ಟಿ ಸೇರಿದಂತೆ ಬೈಲಹೊಂಗಲ ಪಟ್ಟಣದ ಹಿರಿಯರು, ಮುಖಂಡರು, ವೀರರಾಣಿ ಕಿತ್ತೂರು ಚನ್ನಮ್ಮ ತಾಯಿಯ ಅಭಿಮಾನಿಗಳು ಪಾಲ್ಗೊಂಡಿದ್ದರು.