ತುಕಾರಾಮ್ ಗೆಲುವಿಗಾಗಿ ಅಭಿಮಾನಿಗಳಿಂದ ಬೈಕ್ ರ್ಯಾಲಿ

Ravi Talawar
ತುಕಾರಾಮ್ ಗೆಲುವಿಗಾಗಿ ಅಭಿಮಾನಿಗಳಿಂದ ಬೈಕ್ ರ್ಯಾಲಿ
Oplus_131072
WhatsApp Group Join Now
Telegram Group Join Now
ಬಳ್ಳಾರಿ,04 : ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇ ತುಕಾರಾಮ್ ಗೆಲುವಿಗಾಗಿ ಅವರ ಅಭಿಮಾನಿ ಬಳಗದವತಿಯಿಂದ ಪ್ರತಿ ಗ್ರಾಮಗಳಿಗೂ ವಿಶಿಷ್ಟ ರೀತಿಯಲ್ಲಿ ಬೈಕ್ ಮುಖಾಂತರ ಸಂಡೂರು ಅವರ ಅಭಿಮಾನಿಗಳಾದ ಈ ಮಲ್ಲಿಕಾರ್ಜುನ ಸ್ವಾಮಿ ನಾಗರಾಜ ಧರ್ಮ ನಾಗೇಶ್ ಎಂಬ ಯುವಕರ ತಂಡದಿಂದ  ವಿಶಿಷ್ಟವಾಗಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳುವ ಮೂಲಕ ಪ್ರಚಾರ ಕೈಗೊಂಡಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಈ ತುಕಾರಾಂ ಹೆಸರು ಘೋಷಣೆ ಆದ ದಿನದಿಂದಲೂ ತಮ್ಮ ಪ್ರೀತಿಯ ನಾಯಕ ತುಕಾರಾಂ ಗೆಲುವಿಗಾಗಿ ಬಳ್ಳಾರಿ ಜಿಲ್ಲೆಯ ಹಲವಾರು ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡುತ್ತಿದರೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ ದೇಶಕ್ಕೆ ಹಿತ ಹಾಗೂ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ ಈ ತುಕಾರಾಂ ಸರ್ ಅವರು ಸಂಡೂರುನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ, ಸಂಡೂರು ಶಾಸಕರು ಆಗಿ ನಾಲ್ಕುಕ ಭಾರಿ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ, ಅವರನ್ನು ಗುರುತಿಸಿ ಬಳ್ಳಾರಿ ಜಿಲ್ಲೆಯ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ, ಇದರಿಂದ ಅವರ ಅಭಿಮಾನಿಗಳಾದ ನಮಗೆ ಅತ್ಯಂತ ಸಂತೋಷವಾಗಿದೆ,  ಬಳ್ಳಾರಿ ಜಿಲ್ಲೆಯ ಇನ್ನಷ್ಟು ಅಭಿವೃದ್ಧಿಯಾಗಬೇಕಾದಲ್ಲಿ ಅದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ಸಾರಿ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಭಾವುಟ ಹಾರಿಸುವುದು ಕಾಂಗ್ರೆಸ್ ಕಾರ್ಯಕರ್ತರು ಹಾಗು ಅವರ ಅಭಿಮಾನಿಗಳ ಆಸೆಯಾಗಿದೆ, ಎಂದು ತುಕಾರಾಂ ಅಪ್ಪಟ ಅಭಿಮಾನಿಯಾದ ಮಲ್ಲಿಕಾರ್ಜುನ ತಿಳಿಸಿದರು. ಅದಕ್ಕೆ ಪೂರಕವಾಗಿ ನಮ್ಮ ಯುವ ತಂಡ ಅತ್ಯಂತ ಕ್ರಿಯಾಶೀಲವಾಗಿ ತುಕಾರಾಂ ಸರ್ ಗೆಲುವಿಗಾಗಿ ಬಳ್ಳಾರಿ ಬಿಸಿಲು ಲೆಕ್ಕಿಸದೆ ಹಲವಾರು ಗ್ರಾಮಗಳಲ್ಲಿ ಪ್ರಚಾರ ಮಾಡುತ್ತಿದ್ದೇವೆ ಒಳ್ಳೆಯ ವ್ಯಕ್ತಿಯಾ ಗೆಲುವು ಉತ್ತಮ ಸಮಾಜ ಕಟ್ಟಲು ಸಾಧ್ಯ ನಮ್ಮ ಯುವಕರಿಂದ ತುಕಾರಾಮ್ ಪರವಾಗಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಈ ಲೋಕಸಭಾ ಚುನಾವಣೆಯಲ್ಲಿ  ನಮ್ಮ ತುಕಾರಾಂ ಸರ್ ಅವರ ಗೆಲುವು ನಿಶ್ಚಿತ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.
WhatsApp Group Join Now
Telegram Group Join Now
Share This Article