ಬಿಹಾರ ಚುನಾವಣೆ ಫಲಿತಾಂಶ 2028 ಕ್ಕೆ ಕಾಂಗ್ರೆಸ್ ಗೆ  ರಾಜ್ಯದಲ್ಲಿ ಇದೆ ಪರಿಸ್ಥಿತಿ : ಮಹಾಂತೇಶ ವಕ್ಕುಂದ 

Ravi Talawar
ಬಿಹಾರ ಚುನಾವಣೆ ಫಲಿತಾಂಶ 2028 ಕ್ಕೆ ಕಾಂಗ್ರೆಸ್ ಗೆ  ರಾಜ್ಯದಲ್ಲಿ ಇದೆ ಪರಿಸ್ಥಿತಿ : ಮಹಾಂತೇಶ ವಕ್ಕುಂದ 
WhatsApp Group Join Now
Telegram Group Join Now
ಬೆಳಗಾವಿ. ಪ್ರತಿಷ್ಠಿತ  ಬಿಹಾರ ರಾಜ್ಯದಲ್ಲಿ  243 ಕ್ಷೇತ್ರಗಳ ವಿಧಾನ ಸಭೆ ಚುನಾವಣೆಯಲ್ಲಿ 204 ಸ್ಥಾನಗಳನ್ನು ಪ್ರಧಾನಿ ಮೋದಿಜೀ ಹಾಗೂ ಬಿಹಾರ ಸಿ ಎಮ್ ನಿತೀಶ್ ಕುಮಾರ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾದಿಸಿ ಕಾಂಗ್ರೆಸ್ ಹಾಗೂ ಮಹಾ ಘಟಬಂಧನ ಮೈತ್ರಿಕೂಟ ಹೀನಾಯ ಸೋಲು ಅನುಭವಿಸಿದ್ದು  ಈಗ ಕಾಂಗ್ರೇಸ್ ಪಕ್ಷದ ಪರಿಸ್ಥಿತಿ ಐಸಿಯು ನಲ್ಲಿ ಇದೆ ಮತ್ತು 2028 ರ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಹಾರ ರಾಜ್ಯದ ಕಾಂಗ್ರೆಸ್ ಪರಿಸ್ಥಿತಿ ಕರ್ನಾಟಕ ರಾಜ್ಯದಲ್ಲಿ ಆಗಲಿದೆ ಎಂದು ಬೆಳಗಾವಿ ಮಹಾನಗರ ಬಿಜೆಪಿ  ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಹೇಳಿದರು.

   ಅವರು ಶುಕ್ರವಾರದಂದು ಬಿಹಾರ ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆ ಫಲಿತಾಂಶದಲ್ಲಿ ಎನ್ ಡಿ ಎ ಮೈತ್ರಿಕೂಟ ಅಮೋಘ ಜಯ ಸಾದಿಸಿದ ಪ್ರಯುಕ್ತ ಮಹಾನಗರ ಬಿಜೆಪಿ  ಘಟಕ ವತಿಯಿಂದ ಸಂಭ್ರಮಾಚರಣೆ ವೇಳೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಆಚರಣೆ ಮಾಡಿ ಮಾತನಾಡಿದರು.

     ಈ ಸಂದರ್ಭದಲ್ಲಿ  ಭಾಜಪಾ ಹಿರಿಯ ಮುಖಂಡ  ರಮೇಶ ದೇಶಪಾಂಡೆ, ಕುಮಾರಿ ಉಜ್ವಲ ಬಡವನಾಚೆ,  ವಿಜಯ ಕೊಡಗನೂರು, ಮುರುಘೇoದ್ರಗೌಡ ಪಾಟೀಲ  ಸೇರಿದಂತೆ ಪ್ರಮುಖ ಪದಾಧಿಕಾರಿಗಳು, ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article