ಬೆಳಗಾವಿ, ಫೆಬ್ರವರಿ 11: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗಿದೆ. ಬಿಜೆಪಿ ಶಾಸಕ ಅಭಯ ಪಾಟೀಲ್ ಆಪ್ತ ಸದಸ್ಯರ ಸದಸ್ಯತ್ವವೇ ರದ್ದಾಗಿದೆ. ಸದಸ್ಯತ್ವ ರದ್ದು ಮಾಡಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಾರ್ಡ್ ನಂಬರ 41 ರ ಸದಸ್ಯ ಮಂಗೇಶ್ ಪವಾರ್, ವಾರ್ಡ್ ನಂಬರ್ 23ರ ಸದಸ್ಯ ಜಯಂತ್ ಜಾಧವ ಅವರೇ ಸದಸ್ಯತ್ವ ರದ್ದಾದವರು.
ಬಿಜೆಪಿ ಸದಸ್ಯರ ಸದಸ್ಯತ್ವ ರದ್ದತಿಗೆ ಕಾರಣವೇನು?
ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದ ತಿನಿಸುಕಟ್ಟೆಯಲ್ಲಿ ಬಿಜೆಪಿ ಸದಸ್ಯರು ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದರು ಎನ್ನಲಾಗಿದೆ. ಪತ್ನಿ ನೀತಾ ಹೆಸರಿನಲ್ಲಿ ಮಂಗೇಶ್ ಪವಾರ, ಪತ್ನಿ ಸೋನಾಲಿ ಹೆಸರಿನಲ್ಲಿ ಜಯಂತ್ ಜಾಧವ ಮಳಿಗೆ ಪಡೆದಿದ್ದರು. ತಮ್ಮ ಪ್ರಭಾವ ಬೀರಿ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಾರೆಂದು ಸುಜೀತ್ ಮುಳಗುಂದ ದೂರು ನೀಡಿದ್ದರು. ಈ ದೂರು ಆಧರಿಸಿ ಸುಧೀರ್ಘ ವಿಚಾರಣೆ ನಡೆಸಿ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಮಾಡಲಾಗಿದೆ.