ಕಲ್ಲೋಳಿ ; ದೇವಸ್ಥಾನದ ಜಿರ್ಣೋದ್ದಾರ ಕಾಮಗಾರಿಗೆ ಭೂಮಿ ಪೂಜೆ

Pratibha Boi
ಕಲ್ಲೋಳಿ ; ದೇವಸ್ಥಾನದ ಜಿರ್ಣೋದ್ದಾರ ಕಾಮಗಾರಿಗೆ ಭೂಮಿ ಪೂಜೆ
WhatsApp Group Join Now
Telegram Group Join Now

ಮೂಡಲಗಿ : ಅರಭಾವಿ ವಿಧಾನಸಭಾ ಮತಕ್ಷೇತ್ರದ ಬಹುತೇಕ ಗ್ರಾಮಗಳ ಜನರ ಆಶೋತ್ತರಳಿಗೆ ಸ್ಪಂಧಿಸಿದ್ದೇನೆ, ರಾಜ್ಯಸಭಾ ಸಂಸದರ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿಯ ಜೊತೆಗೆ ಎಲ್ಲ ಗ್ರಾಮಗಳಲ್ಲಿ ಅನುದಾನ ಸದ್ಬಳಕೆಯಾಗಿರುವ ಹೆಮ್ಮೆ ನನಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ೨೦೨೫-೨೬ ನೇ ಸಾಲಿನ ಧಾರ್ಮಿಕ ದತ್ತಿ ಇಲಾಖೆಯ ೧೦ ಲಕ್ಷ ರೂ.ಗಳ ಅನುದಾನದಲ್ಲಿ ದೇವಸ್ಥಾನದ ಜಿರ್ಣೋದ್ದಾರ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಕಲ್ಲೋಳಿ ಪಟ್ಟಣ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿ ಸಂಸದರ ಅನುದಾನದಲ್ಲಿ ಸುಸಜ್ಜಿತವಾದ ಕಲ್ಯಾಣ ಮಂಟಪದ ಅವಶ್ಯಕತೆ ಇತ್ತು. ಅದರ ನಿರ್ಮಾಣಕ್ಕೆ ನಾನು ಸಾಕ? ಕಡೆ ಹಣ ಸಂಗ್ರಹ ಮಾಡಿ ಕಾರ್ಯ ಪ್ರಾರಂಭ ಮಾಡಬೇಕೆಂದರೂ ಕೂಡ ಅದಕ್ಕೆ ರಾಜಕೀಯವಾಗಿ ಸಾಕ? ತೋದರೆಗಳಾದವು. ಹೀಗಾಗಿ ಆ ಕೆಲಸ ಅರ್ಧಕ್ಕೆ ನಿಂತಿದೆ ಗ್ರಾಮಸ್ಥರು ಇಂತ ಕೆಲಸಗಳು ಬಂದಾಗ ಇದರ ಬಗ್ಗೆ ಗಮನ ಹರಿಸಬೇಕಾಗದ ಅಗತ್ಯ ಇದೆ ಎಂದರು.
ಕಲ್ಲೋಳಿ ಪಟ್ಟಣದಲ್ಲಿ ಈಗಾಗಲೇ ರಾಜ್ಯಸಭಾ ಸಂಸದರ ನಿಧಿಯಿಂದ ಸುಮಾರು ಒಟ್ಟು ೭೦ ಲಕ್ಷ ರೂ.ಗಳ ಅನುದಾನ ನೀಡಿದ್ದೇನೆ ಗ್ರಾಮಕ್ಕೆ ಯಾವುದೇ ಅನುದಾನ ಬಂದರೂ ಕೂಡ ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಬರುವಂತಹ ದಿನಗಳಲ್ಲಿ ಆ ಕೊರತೆ ನಿಗಿಸಲು ಏನು ಸಾಧ್ಯವಿದೆ ನನ್ನ ಕಡೆಯಿಂದ ಪ್ರಯತ್ನ ಮಾಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಮಹಾಲಕ್ಷ್ಮೀದೇವಿ ದೇವಸ್ಥಾನದ ಜಿರ್ಣೋದ್ದಾರಕ್ಕೆ ಅನುದಾನ ನೀಡಿದ ರಾಜ್ಯ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪಟ್ಟಣದ ಜನತೆ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟದ ಪ್ರಮುಖರಾದ ಬಸವರಾಜ ಕಡಾಡಿ, ಲಕ್ಕಣ್ಣ ಸವಸುದ್ದಿ, ಶಿವಪ್ಪ ಬಿ.ಪಾಟೀಲ, ಧರೇಪ್ಪ ಖಾನಗೌಡ್ರ, ಪ್ರಭು ಕಡಾಡಿ, ಸಿದ್ದಪ್ಪ ಮಾಯನ್ನವರ, ಹಣಮಂತ ಸಂಗಟಿ, ಅಡಿವೆಪ್ಪ ಕುರಬೇಟ, ಶಿವಾನಂದ ಹೆಬ್ಬಾಳ, ಅಜೀತ ಚಿಕ್ಕೋಡಿ, ಮಾಯನ್ನವರ ವಕೀಲರು, ಗೂಳಪ್ಪ ವಿಜಯನಗರ, ಪರಪ್ಪ ಗಿರೆಣ್ಣವರ, ಕೃ?ಪ್ಪ ಮುಂಡಿಗನಾಳ, ಬಾಳಪ್ಪ ಮಟಗಾರ, ತುಕಾರಾಮ ಪಾಲ್ಕಿ, ಗುರುನಾಥ ವ್ಯಾಪಾರಿ, ಸಹದೇವ ಹೆಬ್ಬಾಳ, ಶಂಕರ ಖಾನಗೌಡ್ರ, ಪರಪ್ಪ ಮಳವಾಡ, ಪ್ರಕಾಶ ಬಡಿಗೇರ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article