ಜಮಖಂಡಿ;ಜಿಲ್ಲಾಪಂಚಾಯತ್‌ನ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಗದೀಶ ಗುಡಗುಂಟಿ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ಆಯುಷ್ ಇಲಾಖೆಯ ಸರ್ಕಾರಿ ಆಯುರ್ವೆದಿಕ್ ಕಾಲೇಜು ಆವರಣದಲ್ಲಿ ಕೊಠಡಿ ನಿರ್ಮಾಣ 20 ಲಕ್ಷರೂ, ಚೌಡಯ್ಯನಗರ /ಪ್ರಾಥಮಿಕ ಶಾಲೆಯ ಆವರಣದಲ್ಲಿ 14.50ಲಕ್ಷ ಅನುದಾನದಲ್ಲಿ ಶಾಲಾ ಕೊಠಡಿ ನಿರ್ಮಾಣ, ಪಿ.ಬಿ ಕಾಲೇಜು ಆವರಣದಲ್ಲಿ ಗ್ರಂಥಾಲಯ ಕೊಠಡಿ 20.70 ಲಕ್ಷ, ಪಿ.ಬಿ ಹೂಸ್ಕೂಲ ಆವರಣದಲ್ಲಿ 17.70 ಲಕ್ಷ ರೂ ಅನುದಾನದಲ್ಲಿ ಕೊಠಡಿ ನಿರ್ಮಾಣ,, ಹಾಗೂ 9 ಲಕ್ಷರೂ ಅನುದಾನದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಕಚೇರಿಗೆ ತಡೆಗೋಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಜಿಲ್ಲಾಪಂಚಾಯತ್ ದಿಂದ ಒಟ್ಟು 81.90 ಲಕ್ಷರೂ ಗಳ ಅನುದಾನದಲ್ಲಿ ಈ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸಚಿವರು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿ ಅತಿ ಅವಶ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ತರಲಾಗಿದೆ ಎಂದು ಹೇಳಿದರು.
ನಗರದ ಪ್ರಮುಖ ರಸ್ತೆಗಳು ಹಾಗೂ ತಾಲೂಕಿನ ಹೋಬಳಿ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು ಎಲ್ಲ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಶಾಸಕ ಜಗದೀಶ ಗುಡಗುಂಟಿ ತಿಳಿಸಿದರು. ಜಿಪಂನ ಎಇಇ ಟಿ.ಜಿ.ತಳವಾರ, ಜೆಇ ಎಚ್.ಜಿ.ಪಾತ್ರೋಟ್, ಅರಣ್ಯ ಇಲಾಖೆಯ ಎಸಿಎಫ್ ಸೆಲ್ವರಾಜ್ ನಾಯ್ಕರ, ಆರ್‌ಎಫ್‌ಓ ಎಂ.ಎಂ. ಸಜ್ಜನ ಆರೋಗ್ಯ ಇಲಾಖೆಯ ಡಾ. ರಜಪೂತ, ಹಾಗೂ ಗುತ್ತಿಗೆದಾರರಾದ ಹಣಮಂತ.ಎನ್.ಲಿಗಾಡೆ, ಆರ್.ಬಿ.ಮಹಾಲಿಂಗಪೂರ, ಮಲ್ಲಪ್ಪ.ಬಿ.ಶಿರೋಳ, ರವಿ.ಬಾಮನೆ, ವೈ.ಎಸ್.ಕರಿಎಲ್ಲಪ್ಪಗೋಳ, ಮುಖಂಡರಾದ ಈಶ್ವರ ಆದೆಪ್ಪನವರ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಶ್ರೀಧರ ಕಂಬಿ, ಯಮನೂರ ಮುಲ್ಲಂಗಿ, ರಮೇಶ ಆಳಬಾಳ, ಶಂಕರ ಕಾಳೆ, ನಗರಸಭೆ ಸದಸ್ಯ ಪ್ರಶಾಂತ ಚರಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.


