ಸವದತ್ತಿ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸವದತ್ತಿ ತಾಲೂಕು ವತಿಯಿಂದ ಹುಲಿಕಟ್ಟಿ ವಲಯದ ಬಸಿಡೋಣಿ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಆಯ್ಕೆಯಾದ ಬಸಿಡೋಣಿ ಕೆರೆಯ ಹೂಳೆತ್ತುವ ಕಾಮಗಾರಿಯ ಭೂಮಿ ಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮವನ್ನು ನಡೆಸಲಾಯಿತು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ನಿರ್ದೇಶಕರಾದ ಎಚ್ ಆರ್ ಲವಕುಮಾರ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ನೀರಿನ ಪಾತ್ರ ಮಹತ್ವದ್ದಾಗಿದ್ದು ನಮ್ಮ ಮುಂದಿನ ದಿನಗಳಲ್ಲಿ ಬರುವ ನೀರಿನ ಬರ ನೀಗಿಸಲು ಮತ್ತು ಪ್ರಾಣಿ ಪಕ್ಷಿಗಳ ಸಂಕುಲ ಉಳಿಸಲು ಭೂಮಿಯ ಅಂತರ್ಜಲ ಹೆಚ್ಚಿಸಲು ಕೆರೆ ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ಸುಮಾರು 956 ಕೆರೆಗಳ ಜೀರ್ಣೋದ್ಧಾರ ಮಾಡಿದ್ದು ಈ ವರ್ಷದ ಅಂತಕ್ಕೆ 1000 ಕೆರೆಗಳ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಪ್ರಾದೇಶಿಕ ಅಭಿಯಂತರರಾದ ನಿಂಗರಾಜ ಮಾಲವಾಡ ರವರು ಮಾತನಾಡಿ ಕೆರೆ ಕಾಮಗಾರಿಯ ರೂಪುರೇಷೆಗಳು ಗ್ರಾಮಸ್ಥರ ಸಹಕಾರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗೊರಬಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮನೀಗೇರವ್ವ ಪುಂಡಲಿಕ ಮಾದರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ವನಿತಾ ಕನ್ಯಾಳ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಮುತ್ತಪ್ಪ ಭಾರಿಗಿಡದ ಉಪಾಧ್ಯಕ್ಷರಾದ ಪತ್ರೆಪ್ಪ ಚಿಕ್ಕುಂಬಿ ತಾಲೂಕಿನ ಯೋಜನಾಧಿಕಾರಿಗಳಾದ ಸುಬ್ರಾಯ ನಾಯ್ಕ್ ಗ್ರಾಮದ ನಿವೃತ್ತ ಶಿಕ್ಷಕರಾದ ಎಂ ಎಸ್ ಜಾವೂರು ವಲಯ ಮೇಲ್ವಿಚಾರಕಿ ಶ್ರೀಮತಿ ಸುನೀತಾ ಹಿರೇಮಠ ಕೃಷಿ ಮೇಲ್ವಿಚಾರಕರಾದ ಅಣ್ಣಪ್ಪ ಎಸ್ ಸೇವಾಪ್ರತಿನಿಧಿ ಶ್ರೀಮತಿ ಸುವರ್ಣ ಹಾಗೂ ಗ್ರಾಮದ ಸುಮಾರು 80 ಜನ ರೈತರು ಮತ್ತು ಮುಖಂಡರು ಉಪಸ್ಥಿತರಿದ್ದರು


