ಬಿಹೆಚ್‌ಇಎಲ್‌ನಲ್ಲಿ ಭರ್ಜರಿ ಉದ್ಯೋಗ: ಇಂಜಿನಿಯರ್‌ ಮತ್ತು ಸುಪರ್‌ವೈಸರ್‌ ನೇಮಕ| 400 ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

Ravi Talawar
ಬಿಹೆಚ್‌ಇಎಲ್‌ನಲ್ಲಿ ಭರ್ಜರಿ ಉದ್ಯೋಗ:  ಇಂಜಿನಿಯರ್‌ ಮತ್ತು ಸುಪರ್‌ವೈಸರ್‌ ನೇಮಕ| 400 ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ
WhatsApp Group Join Now
Telegram Group Join Now

ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ತನ್ನಲ್ಲಿ ಖಾಲಿ ಇರುವ ವಿವಿಧ ನೂರಾರು ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮುಂದಿನ ತಿಂಗಳ ಫೆಬ್ರವರಿ 1ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಅಧಿಸೂಚನೆ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರಿ ಸಂಸ್ಥೆಯಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)ನಲ್ಲಿ ಇಂಜಿನಿಯರ್ ಟ್ರೈನಿ ಮತ್ತು ಸೂಪರ್ವೈಸರ್ ಟ್ರೈನಿ (ಟೆಕ್) ಸೇರಿ ಒಟ್ಟು 400.ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ನೀವು ಫೆ.1ರಿಂದ ಸಲ್ಲಿಸಬಹುದಾಗಿದೆ.

ನೇಮಕಾತಿ ಸಂಸ್ಥೆ: ಭಾರತ್ ಹೆವಿ ಎಲ್ಟಿಕಲ್ಸ್ ಲಿಮಿಟೆಡ್ (BHEL) ಹುದ್ದೆಗಳ ಯಾವುವು: ಇಂಜಿನಿಯರ್ ಟ್ರೈನಿ ಮತ್ತು ಸೂಪರ್ವೈಸರ್ ಟ್ರೈನಿ (ಟೆಕ್)
ಹುದ್ದೆಗಳ ವಿವರ: ಇಂಜಿನಿಯರ್ ಟ್ರೈನಿ – 250, ಸೂಪರ್ವೈಸರ್ ಟ್ರೈನಿ – 150
ಒಟ್ಟು ಖಾಲಿ ಹುದ್ದೆಗಳು: 400 ಪೋಸ್ಟ್
ಅರ್ಜಿ ಸಲ್ಲಿಕೆ ಆರಂಭ: ಫೆಬ್ರವರಿ 1
ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್ ಆನ್ಲೈನ್ ಲಿಂಕ್: careers.bhel.in
ಶೈಕ್ಷಣಿಕ ಅರ್ಹತೆ: ಭಾರತ್ ಹೆವಿ ಎಲ್ಟಿಕಲ್ಸ್ ಲಿಮಿಟೆಡ್ (BHEL) ನೇಮಕಾತಿ ಅಧಿಸೂಚನೆ ಪ್ರಕಾರ, ಈ ಇಂಜಿನಿಯರ್ ಟ್ರೈನಿ ಗಳಿಗೆ ಅರ್ಜಿ ಸಲ್ಲಿಸುವವರು ಬಿಟೆಕ್/ಬಿಐ ಪದವಿ ಪೂರ್ಣಗೊಳಿಸಿರಬೇಕು. ಸೂಪರ್ವೈಸರ್ ಟ್ರೈನಿ ಹುದ್ದೆಗಳಿಗೆ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಆಗಿರಬೇಕು ಎಂದು ತಿಳಿಸಿದೆ.
ವಯೋಮಿತಿ ವಿವರ: ಈ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಯಾವುದೇ ಅರ್ಹ ಅಭ್ಯರ್ಥಿಗಳಲ್ಲಿ ಇಂಜಿನಿಯರ್ ಟ್ರೈನಿ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 27 ವರ್ಷ ಆಗಿಬೇಕು. ಸೂಪರ್ವೈಸರ್ ಟ್ರೈನಿ ಅಭ್ಯರ್ಥಿಗಳಿಗೆ ಕನಿಷ್ಠ 21 ರಿಂದ 27 ವರ್ಷ ವಯಸ್ಸಾಗಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಶುಲ್ಕ: ಬಿಎಚ್ಇಎಲ್ ಸಾಮಾನ್ಯ/ಓಬಿಸಿ/ಇತರೆ ವರ್ಗಕ್ಕೆ 795 ರೂಪಾಯಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗ/ಅಂಗವಿಕಲ /ಮಾಜಿ ಸೈನಿಕ ಅಭ್ಯರ್ಥಿಗಳಿಗೆ 295 ರೂಪಾಯಿ ನಿಗಿದ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ನಂತರ ಅವರಿಗೆ ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಸೂಚನೆ ಮಾಹಿತಿ ನೀಡಿದೆ.
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಕೆಗೆ ಇಲ್ಲಿ ನೀಡಲಾಗಿರುವ ಅಧಿಕೃತ ಜಾಲತಾಣಕ್ಕೆ careers.bhel.in ಅಥವಾ https://www.bhel.com/ ಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಕೆ ಆರಂಭವಾಗುತ್ತಿದ್ದಂತೆ ಮತ್ತಷ್ಟು ಮಾಹಿತಿಗಳು, ಕೊನೆ ದಿನಾಂಕದ ವಿವರ ಸಿಗಲಿದೆ.

WhatsApp Group Join Now
Telegram Group Join Now
Share This Article