ದುನಿಯಾ ವಿಜಯ್ ನಾಯಕ ನಟನಾಗಿ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹು ನಿರೀಕ್ಷಿತ ಚಿತ್ರ ಭೀಮ ಸೆನ್ಸಾರ್ ಮಂಡಳಿಯಿಂದ A ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಆಗಸ್ಟ್ 9 ರಂದು ತೆರೆ ಮೇಲೆ ಬರಲು ಸಜ್ಜಾಗಿದೆ.
ಡ್ರಗ್ ಮುಕ್ತ ಸಮಾಜಕ್ಕೆ ಕರೆ ನೀಡುವ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಅರಿವು ಮೂಡಿಸುವಂತಹ ಸಂದೇಶ ನೀಡುವ ಚಿತ್ರ ಇದಾಗಿದ್ದು, ಮೊದಲ ದಿನವೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧಗೊಂಡಿದೆ.
ಚಿತ್ರ ಕುರಿತು ಮಾತನಾಡಿದ ದುನಿಯಾ ವಿಜಯ್ ಅವರು, ಭೀಮ ಚಿತ್ರದಲ್ಲಿ ಒಂದು ಸಂದೇಶ ಇದೆ. ಇದು ಸಮಾಜಿ ಕಳಕಳಿ ಸಂದೇಶ ಆಗಿದೆ. ಅದನ್ನು ಚಿತ್ರದಲ್ಲಿ ವಿಭಿನ್ನವಾಗಿಯೇ ತೋರಿಸೋ ಕೆಲಸ ಆಗಿದೆ. ಎಂಎನ್’ಸಿ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಕೆಲಸ ಮಾಡುವವರು, ಮಕ್ಕಳು ಮತ್ತು ಬಡಕುಟುಂಬಗಳ ಎದುರಿಸುತ್ತಿರುವ ಸವಾಲುಗಳು, ಒಳನೋಟಗಳು ಮತ್ತು ಪ್ರತಿಫಲನಗಳನ್ನು ತೋರಿಸಲಾಗಿದೆ ಎಂದು ಹೇಳಿದ್ದಾರೆ.