ನಾನು ಕಿಡ್ನ್ಯಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದ ಭವಾನಿ ರೇವಣ್ಣ

Ravi Talawar
ನಾನು ಕಿಡ್ನ್ಯಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದ ಭವಾನಿ ರೇವಣ್ಣ
WhatsApp Group Join Now
Telegram Group Join Now

ಬೆಂಗಳೂರು, ಜೂನ್.08: ಮೈಸೂರಿನ ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಹೆಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಹಲವು ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ಭವಾನಿ ರೇವಣ್ಣ ಖುದ್ದಾಗಿ ಹಾಜರಾಗಿ ತನಿಖೆಗೆ ಸಹಕರಿಸಬೇಕು.

ಭವಾನಿ ರೇವಣ್ಣ ಹಾಜರಾದಾಗ ಎಸ್‌ಐಟಿ ಪೊಲೀಸರು ಬಂಧಿಸಬಾರದು ಎಂದು ಕೋರ್ಟ್ ಹೇಳಿದೆ. ಈ ಹಿನ್ನೆಲೆ ನಿನ್ನೆ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿದ್ದು, ನಾನು ಕಿಡ್ನ್ಯಾಪ್  ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎಸ್ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಿಡ್ನಾಪ್ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದವರು. ನಾನು ಕಿಡ್ನಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದು ಭವಾನಿ ರೇವಣ್ಣ ಅವರು ಎಸ್​ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ವೇಳೆ ಇಬ್ಬರು ಆರೋಪಿಗಳ ನಡುವಿನ ಆಡಿಯೋ ಸಂಭಾಷಣೆ ಇಟ್ಟು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸತೀಶ್ ಬಾಬಣ್ಣ ಹಾಗೂ ರಾಜಗೋಪಾಲ್ ನಡುವಿನ ಆಡಿಯೋ ಸಂಭಾಷಣೆ ಇಟ್ಟು ವಿಚಾರಣೆ ಮಾಡಿದ್ದು ನಾನು ಯಾರನ್ನೂ ಕರೆದುಕೊಂಡು ಬರಲು ಹೇಳಿಲ್ಲ.

ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಭವಾನಿ ರೇವಣ್ಣ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ. ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು ಇಂದು ಮತ್ತೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
Share This Article