ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ: ಭಾಸ್ಕರ್‌ರಾವ್

Ravi Talawar
ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ: ಭಾಸ್ಕರ್‌ರಾವ್
WhatsApp Group Join Now
Telegram Group Join Now
ಬಳ್ಳಾರಿ: 05.ರೆಡ್ ಕ್ರಾಸ್ ಸಂಸ್ಥೆಯು ಯಾವುದೇ ಜಾತಿ, ಧರ್ಮದ ಹಂಗು ಇಲ್ಲದೇ ಮಾನವೀಯತೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ನಿವೃತ್ತ ಐ.ಪಿ.ಎಸ್. ಅಧಿಕಾರಿ ಭಾಸ್ಕರ್‌ರಾವ್ ತಿಳಿಸಿದರು.
ನಗರದ ಡಾ||ರಾಜ್‌ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅ್ಯಂಡ್ ಕಾಲೇಜ್‌ನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿAದ ಅಗ್ನಿ ಅವಘಡ ಉಂಟಾದಾಗ ಅದನ್ನು ಯಾವ ರೀತಿ ಸರಿಪಡಿಸಬೇಕು ಎನ್ನುವುದನ್ನು ವಿಧ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಅಣುಕು ಪ್ರದರ್ಶನದಲ್ಲಿ ಮಾತನಾಡಿದ ಅವರು,  ಅವಘಡದಂತಹ ಸಂಧರ್ಭದಲ್ಲಿ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ಅರ್ಥಪೂರ್ಣವಾಗಿ ತಿಳಿಸಿದರು.
ವಿಧ್ಯಾರ್ಥಿಗಳಿಗೆ ನಾಯಿ ಕಡಿತ ಹಾಗೂ ಪಿಟ್ಸ್ನಂತಹ ಸಂದರ್ಭದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ತಿಳಿಸಿದರು. ವಿದ್ಯಾರ್ಥಿಗಳು ಉತ್ತಮ ನಾಯಕರಾಗಬೇಕು ಎಂದು ಹೇಳಿದರು.
ನಂತರ ಅಣುಕು ಪ್ರದರ್ಶನ ನೀಡಿದ ರೆಡ್ ಕ್ರಾಸ್ ಸಂಸ್ಥೆಯ ಸೇವಾ ನಿರತರಿಗೆ ಅಭಿನಂದನಾ ಪತ್ರವನ್ನು ವಿತರಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷರಾದ    ಡಾ|| ಎಸ್.ಜೆ.ವಿ.ಮಹಿಪಾಲ್,  ಬಿಪಿಎಸ್‌ಸಿ ಶಾಲೆಯ ಪ್ರಾಂಶುಪಾಲ ಜೆ.ಅನೀಲ್ ಕುಮಾರ್,  ಶಕೀಬ್ ಕಾರ್ಯದರ್ಶಿ ಐ.ಆರ್.ಸಿ ಹಾಗೂ ಶಾಲಾ ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article