ನವದೆಹಲಿ (ಮಾರ್ಚ್ 12): ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್ನಲ್ಲಿರುವ ಭಾರತೀಯ ಸಮುದಾಯವನ್ನು ಕೈಮುಗಿದು ಸ್ವಾಗತಿಸಿದರು. “ನಾವು ಒಂದೇ ಕುಟುಂಬದವರಂತೆ. ಮಾರಿಷಸ್ ಮಿನಿ ಭಾರತವಿದ್ದಂತೆ. ನಾನು 10 ವರ್ಷಗಳ ಹಿಂದೆ ಇದೇ ದಿನದಂದು ಮಾರಿಷಸ್ಗೆ ಭೇಟಿ ನೀಡಿದ್ದೆ. ಹೋಳಿಯ ಒಂದು ವಾರದ ನಂತರ ನಾನು ಬಂದಿದ್ದೆ. ಈ ಬಾರಿ, ನಾನು ಹೋಳಿಯ ಬಣ್ಣಗಳನ್ನು ನನ್ನೊಂದಿಗೆ ಭಾರತಕ್ಕೆ ತೆಗೆದುಕೊಂಡು ಹೋಗುತ್ತೇನೆ” ಎಂದು ಮೋದಿ ನೆನಪಿಸಿಕೊಂಡರು. “ನಾನು ಮಾರಿಷಸ್ಗೆ ಬಂದಾಗಲೆಲ್ಲಾ, ಇಲ್ಲಿ ಇರುವವರೆಲ್ಲ ನನ್ನ ಸ್ವಂತದವರೆಂಬಂತೆ ಭಾಸವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಮಾರಿಷನ್ ಮಿನಿ ಭಾರತ ಇದ್ದಂತೆ: ಇಲ್ಲಿರುವವರು ನನ್ನವರಂತೆ ಭಾಸ; ಮೋದಿ ಮಾರಿಷ್ನ್ಗೆ ಮೆಚ್ಚುಗೆ

ಭಾರತದ ಪಶ್ಚಿಮ ಭಾಗದಲ್ಲಿ ಸಿಹಿತಿಂಡಿಗಳಿಗಾಗಿ ಮಾರಿಷಸ್ನಿಂದ ಸಕ್ಕರೆಯನ್ನು ಆಮದು ಮಾಡಿಕೊಳ್ಳುತ್ತಿದ್ದ ಕಾಲವಿತ್ತು. ಬಹುಶಃ ಸಕ್ಕರೆಯನ್ನು ಗುಜರಾತಿಯಲ್ಲಿ ‘ಮೊರಾಸ್’ ಎಂದೂ ಕರೆಯಲು ಇದು ಒಂದು ಕಾರಣವಾಗಿರಬಹುದು. ಕಾಲ ಕಳೆದಂತೆ, ಭಾರತ ಮತ್ತು ಮಾರಿಷಸ್ ನಡುವಿನ ಸಂಬಂಧಗಳ ಮಾಧುರ್ಯ ಹೆಚ್ಚುತ್ತಲೇ ಇದೆ. “ನಾನು ಮಾರಿಷಸ್ಗೆ ಬಂದಾಗಲೆಲ್ಲಾ ನಾನು ನನ್ನ ಸ್ವಂತ ಜನರ ನಡುವೆ ಬಂದಂತೆ ಭಾಸವಾಗುತ್ತದೆ. ಇಲ್ಲಿನ ಗಾಳಿ, ಮಣ್ಣು ಮತ್ತು ನೀರಿನಲ್ಲಿ ಆತ್ಮೀಯತೆಯ ಭಾವನೆ ಇದೆ. ನಮ್ಮ ಪೂರ್ವಜರ ರಕ್ತ ಮತ್ತು ಬೆವರು ಇಲ್ಲಿನ ಮಣ್ಣಿನಲ್ಲಿ ಬೆರೆತಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.