ಬೆಳಗಾವಿ: ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಸರ್ಕಾರದ ಅಸ್ತಿತ್ವವನ್ನು ಉಳಿಸಿಕೊಳ್ಳಲು ದೇಶದಲ್ಲಿ 1975 ಜೂನ್ 25 ರಂದು ತುರ್ತು ಪರಿಸ್ಥಿತಿಯನ್ನು ಹೇರಿದ್ದರು ಈ ಘಟನೆಗೆ 50 ವರ್ಷವೇ ಗತಿಸಿದ್ದು ಬಜಿಪಿಯು ತುರ್ತು ಪರಿಸ್ಥಿತಿ ವಿರೋಧಿಸಿ ಸಂವಿಧಾನ ಉಳಿವಿಗಾಗಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ ಸಂವಿಧಾನವನ್ನು ಗಾಳಿಗೆ ತೂರಿ ತಮ್ಮ ಸ್ವಾರ್ಥಕ್ಕಾಗಿ ಕೋರ್ಟ್ ನಿರ್ಣಯವನ್ನು ಧಿಕ್ಕರಿಸಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1,40,000 ಜನರನ್ನು ಜೈಲಿಗೆ ಹಾಕಿದ್ದರು . ಸಾವಿರಾರು ಜನರನ್ನು ಜೈಲಿನಲ್ಲಿ ಸಾಯುವ ಹಾಗೆ ಮಾಡಿದರು.
ಹಿಟ್ಲರ್ ಶಾಹಿ ಸರ್ಕಾರ ಎಂದರೆ ಕಾಂಗ್ರೆಸ್ ಸರ್ಕಾರ ಎಂದು ಕಟುವಾಗಿ ಟೀಕಿಸಿದರು.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ದೇಶದ ಜನತೆಗೆ ಕ್ಷಮೆ ಕೇಳಬೇಕು ನಂತರ ಸಂವಿಧಾನದ ಬಗ್ಗೆ ಮಾತನಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಸಂಜೆಯ ಪಾಟೀಲ್ ಅವರು ಮಾತನಾಡಿ ಸಂವಿಧಾನ ರಕ್ಷಣೆಗಾಗಿ ನಮ್ಮ ಪಕ್ಷ ಬದ್ಧವಾಗಿದೆ. ದೇಶದ ಜನತೆಗೆ ಕಾಂಗ್ರೆಸ್ ಪಕ್ಷ ಸುಳ್ಳು ಹೇಳುತ್ತಿದೆ. ಸುಳ್ಳಿನ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿಗಳ ಕುರಿತು ಜನತೆಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ರಾಹುಲ್ ಗಾಂಧಿಯವರು ಚುನಾವಣೆಯಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎಂದು ಸುಳ್ಳು ಹೇಳಿದರು ಎಂದು ಕಟುವಾಗಿ ಟೀಕಿಸಿದರು.
ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬೇನಕೆ ಅವರ ಉಪಸ್ಥಿತಿಯಲ್ಲಿ ಬೆಳಗಾವಿ ಮಹಾನಗರ ಮತ್ತು ಗ್ರಾಮೀಣ ಬಿಜೆಪಿ ಅಧ್ಯಕ್ಷರಾದ ಸುಭಾಷ್ ಪಾಟೀಲ್, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ, ಖಾನಾಪುರ್ ಶಾಸಕ ವಿಠಲ್ ಹಾಲಿಗೆಕರ್, ಮಾಜಿ ಶಾಸಕ ಸಂಜಯ್ ಪಾಟೀಲ್, ಮಹಾಂತೇಶ್ ದೊಡ್ಡಗೌಡರ್, ಮಾಜಿ ಶಾಸಕರುಗಳು ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಸರ್ಕಿಟ್ ಹೌಸ್ ನಿಂದ ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಹೋಗಲು ನಿರ್ಧರಿಸಿದ್ದರು ಆದರೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಪೊಲೀಸರು ಬಿಜೆಪಿ ನಾಯಕರುಗಳನ್ನು ಬಂಧಿಸಿ ಪೋಲಿಸ್ ವಾಹನದಲ್ಲಿ ಕರೆದುಕೊಂಡು ಸರ್ಕಿಟ್ ಹೌಸನಲ್ಲಿ ಬಿಡುಗೊಳಿಸಿದರು.