ಶೀಘ್ರದಲ್ಲೇ ಗಡಿಗಿ ಚೆನ್ನಪ್ಪ ವೃತ್ತ ಉದ್ಘಾಟನೆ : ಭರತ್ ರೆಡ್ಡಿ 

Ravi Talawar
ಶೀಘ್ರದಲ್ಲೇ ಗಡಿಗಿ ಚೆನ್ನಪ್ಪ ವೃತ್ತ ಉದ್ಘಾಟನೆ : ಭರತ್ ರೆಡ್ಡಿ 
WhatsApp Group Join Now
Telegram Group Join Now
 ಬಳ್ಳಾರಿ ಜುಲೈ 17 : ನಗರದ ಹೃದಯ ಭಾಗದಲ್ಲಿರುವ ಗಡಿಗಿ ಚೆನ್ನಪ್ಪ ವೃತ್ತವನ್ನು ಅತ್ಯಂತ ಉತ್ತಮವಾದ ಗುಣಮಟ್ಟದಲ್ಲಿ ಕಾಮಗಾರಿಯನ್ನು  ನಡೆಸಲಾಗುತ್ತಿದೆ  ನಗರದ ಜನರು ಸ್ವಲ್ಪ ತಾಳ್ಮೆಯಿಂದ ಇರಬೇಕು, ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು ಅದೇ ರೀತಿ ಗುಣಮಟ್ಟದ ಕಾಮಗಾರಿ ಬೇಕಾದಲ್ಲಿ ಸಂಚಾರದಲ್ಲಿ ಸಮಸ್ಯೆ ಕಾಣುವುದು ಸಹಜ ಸಾರ್ವಜನಿಕರು ಸಹಕರಿಸಬೇಕು ಯಾರೇ  ಏನೇ ಒತ್ತಡ ಹಾಕಿದರೂ ಗಡಿಗಿ ಚನ್ನಪ್ಪ ವೃತ್ತವನ್ನು ಉತ್ತಮ ಗುಣಮಟ್ಟದಿಂದ ಸಂಪೂರ್ಣ ಕಾಮಗಾರಿ ಮುಗಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಗಡಿಗಿ ಚೆನ್ನಪ್ಪ ವೃತ್ತದ ಉದ್ಘಾಟನೆ ಉದ್ದೇಶವಾಗಿ ಮುಂದೂಡುತ್ತಿಲ್ಲ, ಕಾಮಗಾರಿ ನಡೆಸಲು ಸ್ವಲ್ಪ ವಿಳಂಬವಾಗುತ್ತಿದೆ ಮತ್ತು ಕಾಮಗಾರಿ ತಡವಾಗಿ ನಡೆಯಲು  ಹಲವು ಕಾರಣಗಳಿವೆ, ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ, ಕೆಲ ಕಾಮಗಾರಿಗೆ ಸರ್ಕಾರದ ಅನಮೋದನೆ ವಿಳಂಬ ಆಗಿದೆ, ಆದ್ದರಿಂದ ಗಡಿಗಿ ಚನ್ನಪ್ಪ ವೃತ್ತ ಉದ್ಘಾಟನೆ ತಡವಾಗಿದೆ, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು, ಶಾಶ್ವತ ಕಾಮಗಾರಿ ಆಗಿರುವ ಕಾರಣ ಉತ್ತಮ ರೀತಿಯಲ್ಲೇ ಮಾಡಬೇಕಾಗಿದೆ, ಆದಷ್ಟು ಶೀಘ್ರದಲ್ಲೇ ವೃತ್ತವನ್ನು ಉದ್ಘಾಟನೆ ಮಾಡಲಾಗುವುದು ಎಂದರು.
WhatsApp Group Join Now
Telegram Group Join Now
Share This Article