ಬಾಲಗೌರವ ಪ್ರಶಸ್ತಿಗೆ ಭಾಗ್ಯಶ್ರೀ ಡೊಣಗಿ ಆಯ್ಕೆ

Pratibha Boi
ಬಾಲಗೌರವ ಪ್ರಶಸ್ತಿಗೆ ಭಾಗ್ಯಶ್ರೀ ಡೊಣಗಿ ಆಯ್ಕೆ
WhatsApp Group Join Now
Telegram Group Join Now

ವಿಜಯಪುರ :ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಭಾಗ್ಯಶ್ರೀ ಡೊಣಗಿ ಬಾಲ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.

ಇದೇ ಡಿಸೆಂಬರ್ 16ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ಜರುಗುವ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, 10,000 ರೂ ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಿದ್ದಾರೆ. ಶಿಕ್ಷಕ ಶ್ರೀಮಂತ ಡೊಣಗಿ ಹಾಗೂ ಬಂಗಾರೆವ್ವ ಡೊ ಣಗಿ ಇವರ ಪುತ್ರಿಯಾದ ಭಾಗ್ಯಶ್ರೀ ಡೊಣ ಗಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ಈಗಾಗಲೇ ಹಲವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಬಹುಮಾನ ಪಡೆದಿದ್ದು ಶ್ಲಾಘನೀಯ. ವೃಕ್ಷಥಾನ್ ಸ್ಪರ್ಧೆಗಳಲ್ಲಿಯೂ ಕೂಡ ೨೦೦೦೦ ರೂ ಬಹುಮಾನ, ಪ್ರಶಸ್ತಿಗಳನ್ನು ಪಡೆದು ಗಮನ ಸೆಳೆದ ಭಾಗ್ಯಶ್ರೀ ಈಗ ಮತ್ತೊಂದು ಪ್ರಶಸ್ತಿ ಹಾಗೂ ಬಹುಮಾನ ಪಡೆದು ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.ವೈಜ್ಞಾನಿಕ ಅಧ್ಯಯನ, ಚಿತ್ರಕಲೆ, ಯೋಗ, ನೃತ್ಯ, ಕ್ವಿಜ್, ಭಾಷಣ, ಗಾಯನ ದಲ್ಲಿ ಭಾಗ್ಯಶ್ರೀ ತನ್ನದೇ ಆದ ಪ್ರತಿಭೆ ಇದ್ದು ಇವಳಿಗೆ ಈಗ ಬಾಲ ಗೌರವ ಪ್ರಶಸ್ತಿ, ಬಹುಮಾನ ಲಭಿಸಿಸುತ್ತಿರುವದು ತುಂಬಾ ಸಂತೋಷದ ವಿಷಯ.

ಈ ಸಾಧಕಿಗೆ ಬಾಲ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಎಕ್ಸಲೆಂಟ್ ಕಾಲೇಜಿನ ಸಂಸ್ಥಾಪಕ ಬಸವರಾಜ ಕೌಲಗಿ, ಉಪನ್ಯಾಸಕರಾದ ಮಂಜುನಾಥ, ಶರಣಗೌಡ, ಸಿದ್ಧಾರ್ಥ, ರಾಘವೇಂದ್ರ, ಪ್ರವೀಣ್, ಸೃಷ್ಟಿ,ಮುಸ್ತಾಕ್, ಶ್ರದ್ಧಾ, ಅದೇ ರೀತಿ ಜಿಲ್ಲಾ ಆದರ್ಶ ಶಿಕ್ಷಕ ಶ್ರೀಮಂತ ಡೊಣಗಿ, ಬಂಗಾರೆವ್ವ ಡೊಣಗಿ, ವಿಶ್ವ ದಾಖಲೆ ಚಿಣ್ಣ ರೇವಣ್ಣ, ಐಶ್ವರ್ಯ ಮತ್ತಿತರರು ಶುಭ ಹಾರೈಸಿ ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article