ಕಾಗವಾಡ: ತಾಲ್ಲೂಕಿನ ಐನಾಪುರ ಪಟ್ಟಣದ ಮುರಗೇಶ ಗಸ್ತಿ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಥಣಿ ತಾಲ್ಲೂಕಿನ ಪ್ರಾರಂಭವಾದ ದುರ್ಗಾದರ್ಶನ ಪಾಕ್ಷಿಕ ಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಇವರು ಅಥಣಿಯ ಅಥಣಿದರ್ಶನ,ಗಡಿನಾಡು ರಕ್ಷಣೆ ವಾರಪತ್ರಿಕೆಯಲ್ಲಿ ಹಲವಾರು ವರ್ಷಗಳ ವರೆಗೆ ಸಂಕಷ್ಟ ಕಾಲದಲ್ಲಿ ಸಹಸಂಪಾದಕ ಜವಾಬ್ದಾರಿಯನ್ನು ನಿರ್ವಹಿಸಿದರು.
ಬಳಿಕ ಕನ್ನಡಮ್ಮ ದಿನಪತ್ರಿಕೆ ಭಾರತ ವೈಭವ ದಿನಪತ್ರಿಕೆ, ಪ್ರಸ್ತುತ ಹೊಸ ದಿಗಂತ ದಿನಪತ್ರಿಕೆ ಕಾಗವಾಡ ತಾಲ್ಲೂಕು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಸನ್ 2022 ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ವತಿಯಿಂದ ಉತ್ತಮ ವರದಿಗಾರ ಪ್ರಶಸ್ತಿ, 2023. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ವತಿಯಿಂದ 1767 ಮದ್ಯವರ್ಜ ನ ಶಿಬಿರದ ಕಾರ್ಯಕ್ರಮದಲ್ಲಿ ಪತ್ರಕರ್ತ ಅಭಿನಂದನಾ ಪತ್ರ 2024ರಲ್ಲಿ ಬಿವಿ 5 ನ್ಯೂ ಸ್ ಚಾನಲ್ ಸಂಸ್ಥೆ ವತಿಯಿಂದ ಬೆಸ್ಟ್ ರಿಪೊಟ್೯ ಆವಾರ್ಡ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿ ಲಭಿಸಿದೆ.
ಹೊಸದಿಗಂತ ದಿನ ಪತ್ರಿಕೆಯ ಕಾಗವಾಡ ತಾಲೂಕು ವರದಿಗಾರ ಮುರಗೇಶ ಗಸ್ತಿಅವರಿಗೆ ಸುವರ್ಣ ಕರ್ನಾಟಕ ಯುವ ಮಾಧ್ಯಮ ಮಿತ್ರ ರಾಜ್ಯ ಪ್ರಶಸ್ತಿ ಲಭಿಸಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ಮಹಿಳಾ ಗ್ರಾಮೋದ್ಯೋಗ ವತಿಯಿಂದ ಜು.27ರಂದು ಅಥಣಿಯ ಎಸ್ ಎಂ ಎಸ್ ಕಾಲೇಜುದ ಖೋತ ಸಭಾಭವನದಲ್ಲಿ ನಡೆಯಲಿರುವ ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರತಿಭೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುರಗೇಶ ಗಸ್ತಿ ಯವರಿಗೆ ಸುವರ್ಣ ಕರ್ನಾಟಕ ಯುವ ಮಾಧ್ಯಮ ಮಿತ್ರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪತ್ರಿಕೋದ್ಯಮದಲ್ಲಿ ಇಪ್ಪತ್ತು ವರ್ಷಗಳಿಂದ ಗಡಿ ಭಾಗದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ಪ್ರಶಸ್ತಿ ಗೆ ಆಯ್ಕೆ ಮಾಡಿದ್ದಾರೆ. ಪ್ರಸ್ತುತ ಮುರಗೇಶ ಗಸ್ತಿ ಯವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.