ರನ್ನ ಬೆಳಗಲಿ: ಜು.೩೦., ಸಮೀಪದ ಸೋರಗಾಂವ ಗ್ರಾಮದ ಪಿಎಂ ಶ್ರೀ ಶಾಲೆಗಳಾದ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬಾಗಲಕೋಟೆ ಜಿಲ್ಲೆಯ ಅತ್ಯುತ್ತಮ ಪಿಎಂ ಶ್ರೀ ಪುರಸ್ಕಾರ ದೊರೆತಿದ್ದು, ಅಖಿಲ ಭಾರತ ಶಿಕ್ಷಾ ಸಮಾಗಮ ಹಾಗೂ ಉತ್ತಮ ಪಿಎಂ ಶ್ರೀ ಶಾಲೆಯ ಪ್ರಶಸ್ತಿ ಸಮಾರಂಭವು ನವದೆಹಲಿಯ ಭಾರತ ಮಂಡಪಂ ದಲ್ಲಿ ಅಂತರ್ಜಾಲದ ಜೂಮ್ ಲೈವ್ ಕಾರ್ಯಕ್ರಮ ಜರಗಿತು.
ಭಾರತದ ಶಿಕ್ಷಣ ಸಚಿವರಾದ ಧಮೇಂದ್ರ ಪ್ರಧಾನ್ ಮಾನ್ಯರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಕರ್ನಾಟಕದಲ್ಲಿ ಸುಮಾರು ೩೫ ಶಾಲೆಗಳು ಉತ್ತಮ ಪಿಎಂಶ್ರೀ ಶಾಲೆ ಪುರಸ್ಕಾರ ಪಡೆದುಕೊಂಡಿವೆ. ಪ್ರಸ್ತುತ ನೀಟ್ ಪರೀಕ್ಷೆಯಲ್ಲಿ ನಮ್ಮ ರಾ?ದ ಸುಮಾರು ೪೮೦೦೦ ವಿದ್ಯಾರ್ಥಿಗಳು ನೀಟ್ ನಲ್ಲಿ ಅರ್ಹತೆ ಪಡೆದಿದ್ದು ಹೆಮ್ಮೆಯ ವಿಚಾರ, ಪಿಎಂ ಶ್ರೀ ಶಾಲೆಗಳ ಸಬಲೀಕರಣ ಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಬಹಳ ಮಹತ್ವ ಪಡೆದುಕೊಂಡಿದೆ ಎಂದು ತಿಳಿಸಿದರು.
ಮುಧೋಳ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಎಮ್ ಮುಲ್ಲಾ ಈ ಅತ್ಯುತ್ತಮ ಪಿಎಂಶ್ರೀ ಪುರಸ್ಕಾರಕ್ಕೆ ನಮ್ಮ ಸೊರಗಾಂವ ಶಾಲೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಈ ಪ್ರಶಸ್ತಿಗೆ ಕಾರಣಕರ್ತರಾದ ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ, ಎಸ್ ಡಿ ಎಂ ಸಿ ಆಡಳಿತ ಮಂಡಳಿಗೆ,ಪಾಲಕ ಪೋ?ಕರಿಗೆ ಮತ್ತು ಗ್ರಾಮದ ಜನತೆಗೆ ಅಭಿನಂದಿಸಿದರು.
ಉಪ ನಿರ್ದೇಶಕರ ಕಾರ್ಯಾಲಯದ ಡಿವೈಪಿಸಿ ಸಿ ಆರ್ ಓಣಿ,ವಿ?ಯ ಪರಿವೀಕ್ಷಕರಾದ ಎಮ್ ಎಸ್ ನ್ಯಾಮಗೌಡ ಮುಧೋಳ ತಾಲೂಕಿನ ಕ್ಷೇತ್ರ ಸಮನ್ವಯಧಿಕಾರಿಗಳಾದ ಎ ಆರ್ ಛಬ್ಬಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಮೋಹನ ಅಮ್ಮನಗಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ರಮೇಶ ಅರಕೇರಿ,ಪ್ರೌಢ ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಂಕರ ಇರಪಣ್ಣವರ, ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಈರಪ್ಪ ಸುತಾರ,ಶಿಕ್ಷಕರು, ಸರ್ವ ಸದಸ್ಯರು, ಅತಿಥಿ ಶಿಕ್ಷಕರು, ಪಾಲಕ ಪೋ?ಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.