ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಬಳ್ಳಾರಿಗೆ ಪ್ರಥಮ ಸ್ಥಾನ 

MK HasiruKranti
ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಬಳ್ಳಾರಿಗೆ ಪ್ರಥಮ ಸ್ಥಾನ 
WhatsApp Group Join Now
Telegram Group Join Now
ಬಳ್ಳಾರಿ:06. ಹುಬ್ಬಳ್ಳಿಯಲ್ಲಿ ಸದ್ಗುರು ಶ್ರೀ ಸಿದ್ದಾರೂಢಮಹಾಸ್ವಾಮಿಯವರ ಜಯಂತ್ಯೋತ್ಸವ  ಅಂಗವಾಗಿ ಮಠದ ಶ್ರೀ ಮಠದ ಕೈಲಾಸ ಮಂಟಪದ ಶ್ರೀಮನ್ನಿಜಗುಣಶಿವಯೋಗಿ ಭಜನಾ ವೇದಿಕೆಯಲ್ಲಿ  ಮಾ.29 ರಿಂದ ಏ.4ವರೆಗೆ ಆಯೋಜಿಸಿದ್ದ 11ನೇ ವರ್ಷದ “ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ಶ್ರೀ ಮನ್ನಿಜಗುಣಶಿವಯೋಗಿ ತತ್ವಪದ ಮತ್ತು ಜನಪದ ಕಲಾ ತಂಡ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದೆ.
ಪ್ರಶಸ್ತಿ ಪತ್ರ, ಸನ್ಮಾನ ಹಾಗು 1.11 ಲಕ್ಷ ಪ್ರಥಮ ಬಹುಮಾನ ನೀಡಿ ಗೌರವಿಸಿದೆ.
ಭಜನಾ ಸ್ಪರ್ಧೆಯಲ್ಲಿ ಗುರುಗಳಾದ ಯಲ್ಲಾಪುರ ಬಸಪ್ಪ, ಗಾಯಕರಾಗಿ ಕಪ್ಪಗಲ್ಲು  ಗಂಗಾಧರ ಸ್ವಾಮಿ, ಯಲ್ಲಾಪುರ ಬಿ ಬಾಬು ಸ್ವಾಮಿ, ಹಾರ್ಮೋನಿಯಂ ಸಾಥ್  ಜಿ ಮಹಾಲಿಂಗಯ್ಯ, ಡಗ್ಗ ವಾದಕ ಎ ಕೆ ತಿಪ್ಪೇಸ್ವಾಮಿ, ತಾಳ ಮತ್ತು  ಹಿಮ್ಮೇಳದಲ್ಲಿ ವೀರೇಶ, ಹೆಚ್ ಪಶುಪತಿಗೌಡ, ಪ್ರಕಾಶ್, ಎಂ. ಪಿ.ವಿಜಯಕುಮಾ‌ರ್ ಅವರು ಭಾಗವಹಿಸಿದ್ದರು.
ಮಠದಲ್ಲಿ ನಡೆದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆಂದು ಸಿರಿಗೇರಿ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷರು ಹಾಗು ಹಿರಿಯ ಪತ್ರಕರ್ತ ಸಿದ್ದರಾಮಪ್ಪ‌ ಸಿರಿಗೇರಿ, ಪ್ರಧಾನ ಕಾರ್ಯದರ್ಶಿ ಡಿ.ಪರಶುರಾಮಪ್ಪ ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.
WhatsApp Group Join Now
Telegram Group Join Now
Share This Article