ಜೂ.21ರಂದು ಬಳ್ಳಾರಿ ಪಾಲಿಕೆಯ ಮೇಯ‌ರ್, ಉಪಮೇಯರ್ ಚುನಾವಣೆ

Ravi Talawar
ಜೂ.21ರಂದು ಬಳ್ಳಾರಿ ಪಾಲಿಕೆಯ ಮೇಯ‌ರ್, ಉಪಮೇಯರ್ ಚುನಾವಣೆ
WhatsApp Group Join Now
Telegram Group Join Now
 ಬಳ್ಳಾರಿ,ಜೂ.12: ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸ್ಥಾನಕ್ಕೆ ಜೂ.21ರಂದು ಚುನಾವಣೆ ಜರುಗಲಿದೆ.
ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮೇಯರ್ ಸ್ಥಾನವು ಬಿ.ಸಿ.ಎ (ಮಹಿಳೆ) ವರ್ಗಕ್ಕೆ ನಿಗದಿ ಪಡಿಸಿದ್ದು ಮೇಯರ್ ಹಾಗೂ ಉಪಮೇಯರ್ ಮತ್ತು ಪಾಲಿಕೆಯ ನಾಲ್ಕು ಸ್ಥಾಯಿಸಮಿತಿಗಳ ಅಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ಜೂ.21ರಂದು ಮಧ್ಯಾಹ್ನ 12-30 ಗಂಟೆಗೆ ಜರುಗಲಿದೆ ಎಂದು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article