ಬಳ್ಳಾರಿ: (13), “ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ”ವು ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಳ್ಳಾರಿ ಬಿಸಿನೆಸ್ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ಸಹಯೋಗದಲ್ಲಿ 2025ರ ಡಿಸೆಂಬರ್ 5 ಮತ್ತು 6ರಂದು ಪುರುಷರ ಅಂತರ್‌ಕಾಲೇಜು ಫುಟ್‌ಬಾಲ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡ ಆಯ್ಕೆ ಪ್ರಕ್ರಿಯೆಯನ್ನು ಬಳ್ಳಾರಿಯ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (BITM) ನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಆವರಣದಲ್ಲಿ ಭವ್ಯವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಬಳ್ಳಾರಿ, ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ ಮತ್ತು ಕಂಪ್ಲಿ ಪ್ರದೇಶಗಳಿಂದ ಒಟ್ಟು 30 ಸ್ಪರ್ಧಿಗಳು ಭಾಗವಹಿಸಿದರು. ಪ್ರಾಥಮಿಕ ಹಂತದ ಪಂದ್ಯಗಳು ಮತ್ತು ಆಯ್ಕೆ ಸುತ್ತುಗಳ ನಂತರ ನಡೆದ ಅಂತಿಮ ಪಂದ್ಯದಲ್ಲಿ ಬಳ್ಳಾರಿ ಬಿಸಿನೆಸ್ ಕಾಲೇಜಿನ ತಂಡ ಶೈಕ್ಷಣಿಕ ಸಂಸ್ಥೆಗಳ ನಡುವೆ ತೋರಿದ ಸಮರಸಾಧನೆ, ಕೌಶಲ್ಯ ಹಾಗೂ ತಂಡಭಾವದಿಂದ ವಿಜೇತರಾಗಿ ಹೊರಹೊಮ್ಮಿ
ವಿಜೇತ ತಂಡವನ್ನು ಅಭಿನಂದಿಸಿದ ಕಾಲೇಜಿನ ನಿರ್ದೇಶಕರು ಶ್ರೀ ಅಮರ್ ರಾಜ್ ಭೂಪಾಲ್ ರವರು,
“ದೈಹಿಕ ಮತ್ತು ಮಾನಸಿಕ ಸ್ಥೈರ್ಯ, ಕ್ರೀಡಾತ್ಮಕ ಸಿದ್ಧತೆ, ಬದ್ಧತೆ ಮತ್ತು ನಿಯಮಿತ ಅಭ್ಯಾಸ — ಇವುಗಳ ಸಮನ್ವಯವೇ ವಿದ್ಯಾರ್ಥಿಗಳನ್ನು ಮೈದಾನದಲ್ಲಿ ಮುಂಚೂಣಿಗೆ ತರುತ್ತದೆ” ಎಂದು ಹೇಳಿ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು.
ಬಿಸಿಸಿ ವಿದ್ಯಾರ್ಥಿಗಳ ಈ ಸಾಧನೆ ಸಂಸ್ಥೆಯ ಕ್ರೀಡಾ ಚಟುವಟಿಕೆಗಳಿಗೆ ನೀಡಿರುವ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಪರಿಣಾಮಕಾರಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


