ಬಳ್ಳಾರಿ ಬಿಸಿನೆಸ್ ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಪ್ರಥಮ ಸ್ಥಾನ

Pratibha Boi
ಬಳ್ಳಾರಿ ಬಿಸಿನೆಸ್ ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಪ್ರಥಮ ಸ್ಥಾನ
WhatsApp Group Join Now
Telegram Group Join Now
ಬಳ್ಳಾರಿ: (ಡ.13), ಜಿ.ಎಂ. ವಿಶ್ವವಿದ್ಯಾಲಯ ದಾವಣಗೆರೆ ಇವರು ಡಿಸೆಂಬರ್ 4ರಿಂದ 6ರವರೆಗೆ ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿದ್ದ “ಇಗ್ನಿತ್ರನ್ 2025 – ಕೋಡ್ ರಶ್ ಹ್ಯಾಕಥಾನ್ (24 Hours Hackathon)” ಸ್ಪರ್ಧೆ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿತ್ತು. ಹೊಸ ಆವಿಷ್ಕಾರಗಳು, ತಾಂತ್ರಿಕ ಸಾಮರ್ಥ್ಯ, ಸೃಜನಾತ್ಮಕ ಚಿಂತನೆ ಮತ್ತು ತ್ವರಿತ ಸಮಸ್ಯಾ ಪರಿಹಾರ ಸಾಮರ್ಥ್ಯಗಳನ್ನು ಪರಿಶೀಲಿಸುವ ಉದ್ದೇಶದಿಂದ ಆಯೋಜಿಸಲಾದ ಈ ಹ್ಯಾಕಥಾನ್‌ನಲ್ಲಿ ಅನೇಕ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಪೈಪೋಟಿಯಲ್ಲಿನ ಅತ್ಯುತ್ತಮ ಸಾಧನೆಯಾಗಿ ಬಳ್ಳಾರಿ ಬಿಸಿನೆಸ್ ಕಾಲೇಜಿನ (ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳು) ಬಿಸಿಎ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಬಿನ್ಗಿ ನಾಗತೇಜ, ಕೋಮಲ್.ಬಿ, ಶ್ರಾವಣಿ.ಹೆಚ್. ಮತ್ತು ರಶ್ಮಿ ಅವರ ತಂಡ ಗಮನಾರ್ಹ ಪ್ರತಿಭೆಯನ್ನು ತೋರಿಸಿ ಪ್ರಥಮ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದೆ. ಈ ಜಯದೊಂದಿಗೆ ಅವರು ರೂ. 25,000 ರ ಮೊತ್ತದ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಈ ಯಶಸ್ಸು ಬಗ್ಗೆ ಮಾತನಾಡಿದ ಕಾಲೇಜಿನ ನಿರ್ದೇಶಕರು  ಅಮರ್ ರಾಜ್ ಭೂಪಾಲ್ ರವರು,
“ಸಮರ್ಪಕ ತಯಾರಿ, ಪರಿಪೂರ್ಣತೆ ತಲುಪುವ ಸಂಕಲ್ಪ, ಅಸಾಧಾರಣ ಪರಿಶ್ರಮ, ನಿಷ್ಠೆ ಮತ್ತು ನಿರಂತರ ಅಭ್ಯಾಸ — ಈ ಎಲ್ಲವೂ ಒಟ್ಟಾಗಿ ವಿದ್ಯಾರ್ಥಿಗಳನ್ನು ಜಯಶೀಲರನ್ನಾಗಿ ಮಾಡಿವೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ನೂತನ ಚಿಂತನೆ, ನಾಯಕತ್ವ ಮತ್ತು ತಂಡಭಾವವನ್ನು ಬೆಳೆಯುವಲ್ಲಿ ಮಹತ್ವದ ಪಾತ್ರವಹಿಸುತ್ತವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲರು, ಬಿಸಿಎ ವಿಭಾಗದ ಮುಖ್ಯಸ್ಥರು ಹಾಗೂ ಅಧ್ಯಾಪಕರು ಒಗ್ಗಟ್ಟಿನಿಂದ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಭವಿಷ್ಯದಲ್ಲೂ ಇನ್ನಷ್ಟು ರಾಷ್ಟ್ರಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಭಾಗವಹಿಸಿ ಕಾಲೇಜು ಮತ್ತು ಸಂಸ್ಥೆಯ ಹೆಸರನ್ನು ಎತ್ತಿ ಹಿಡಿಯುವಂತೆ ಶುಭಾಶಯಗಳನ್ನು ತಿಳಿಸಿದರು.

ಈ ಸಾಧನೆ ಬಳ್ಳಾರಿ ಬಿಸಿನೆಸ್ ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ್ಯ ಮತ್ತು ಶಿಕ್ಷಣ ಸಂಸ್ಥೆಯ ಮಾರ್ಗದರ್ಶನದ ಪರಿಣಾಮಕಾರಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

WhatsApp Group Join Now
Telegram Group Join Now
Share This Article