ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಜಾರಕಿಹೊಳಿ ಬಣಕ್ಕೆ ಭಾರೀ ಮುನ್ನಡೆ, ಜಾರಕಿಹೊಳಿ ಬೆಂಬಲಿತರ 4 ಅವಿರೋಧ ಆಯ್ಕೆ ಖಚಿತ: ಗಣೇಶ ಹುಕ್ಕೇರಿ, ಅಮರನಾಥ ಜಾರಕಿಹೊಳಿ, ವಿಶ್ವಾಸ ವೈದ್ಯ,ರಾಹುಲ ಜಾರಕಿಹೊಳಿ,ವೀರೂಪಾಕ್ಷ ಮಾಮನಿ ಜಯಭೇರಿ
ಬೆಳಗಾವಿ:ಬಹಳ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿರ್ದೇಶಕರ ಚುನಾವಣೆಯಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿರುವ ಜಾರಕಿಹೊಳಿ ಸಹೋದರರ ಬೆಂಬಲಿಗರು ಆರಂಭಿಕ ಮುನ್ನಡೆ ಸಾಧಿಸಿದ್ದು, ನಾಲ್ಕು ತಾಲೂಕುಗಳಲ್ಲಿ ಅವರ ಬೆಂಬಲಿತ ಅಭ್ಯರ್ಥಿಗಳ ಅವಿರೋಧ ಆಯ್ಕೆ ಖಚಿತವಾಗಿದೆ.
ಬ್ಯಾಂಕಿನ ಒಟ್ಟು 16 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಲ್ಲಿ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣ , ಜಾರಕಿಹೊಳಿ ಬೆಂಬಲಿತ ನಿರ್ದೇಶಕರ ಪ್ರವೇಶ ಅಧಿಕೃತವಾಗಿದೆ.
ಜಾರಕಿಹೊಳಿ ಬೆಂಬಲಿತ 4 ಸ್ಥಾನಗಳ ಗೆಲುವು ಖಚಿತ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮದ್ಯಾಹ್ನ 3 ಘಂಟೆಗೆ ಮುಕ್ತಾಯಗೊಂಡ ಬೆನ್ನಲ್ಲೇ ಈ ಫಲಿತಾಂಶ ತಿಳಿದುಬಂದಿದೆ . ತಾಲೂಕಿನ ಒಂದು ನಿರ್ದೇಶಕ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ನಾಲ್ಕು ಸ್ಥಾನಗಳ ಗೆಲುವು ಖಚಿತವಾಗಿದೆ
ಜಾರಕಿಹೊಳಿ ಬಣದ 6 ಅಭ್ಯರ್ಥಿಗಳು ಅವಿರೋಧ
ರಮೇಶ್ ಕತ್ತಿ ಬಣಕ್ಕೆ ಬಿಗ್ ಶಾಕ್ ಆಗಿದೆ. ಬಿಜೆಪಿಯ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಚುನಾವಣೆಗಾಗಿ ಒಂದಾದ ಹಿನ್ನೆಲೆಯಲ್ಲಿ ಜಾರಕಿಹೊಳಿ ಬಣದ 6 ಮಂದಿ ನಿರ್ದೇಶಕರಾಗಿ ಅವರೋಧವಾಗಿ ಆಯ್ಕೆಯಾಗಿದ್ದಾರೆ. ಡಿಸಿಸಿ ಬ್ಯಾಂಕ್ ನ 16 ನಿರ್ದೇಶಕ ಸ್ಥಾನಗಳ ಪೈಕಿ 6 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಚಿಕ್ಕೋಡಿಯಿಂದ ಗಣೇಶ್ ಹುಕ್ಕೇರಿ, ಯರಗಟ್ಟಿಯಿಂದ ವಿಶ್ವಾಸ ವೈದ್ಯ, ಮೂಡಲಗಿಯಿಂದ ನೀಲಕಂಠ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಗೋಕಾಕ್ ನಿಂದ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಕ್ಟೋಬರ್ 13ರಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಗಣೇಶ ಹುಕ್ಕೇರಿ ಅವಿರೋಧ ಆಯ್ಕೆ: ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳದ ಶಾಸಕ ಗಣೇಶ ಹುಕ್ಕೇರಿ (ಚಿಕ್ಕೋಡಿ) ಅವರ ಆಯ್ಕೆಯೂ ಖಚಿತವಾಗಿದ್ದು, ಅವರ ಗೆಲುವನ್ನು ಚುನಾವಣಾ ಕಣದಲ್ಲಿ ಗಮನಾರ್ಹ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಈ ಬೆಳವಣಿಗೆಯು ಡಿಸಿಸಿ ಬ್ಯಾಂಕ್ನ ಆಡಳಿತ ಮಂಡಳಿಯಲ್ಲಿ ಜಾರಕಿಹೊಳಿ ಕುಟುಂಬದ ತೆಕ್ಕೆಗೆ ತೆಗೆದುಕೊಳ್ಳುವ ಸೂಚನೆ ನೀಡಿದೆ. ಉಳಿದ ಸ್ಥಾನಗಳಿಗೆ ನಾಮಪತ್ರಗಳ ಪರಿಶೀಲನೆ ಕಾರ್ಯ ನಾಳೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 13 ಕೊನೆಯ ದಿನಾಂಕವಾಗಿದೆ. ಇದರ ನಂತರ ಉಳಿದ ಸ್ಥಾನಗಳಿಗೆ ಸ್ಪರ್ಧೆಯ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.
ಕಣದಲ್ಲಿ ಉಳಿದ ಅಭ್ಯರ್ಥಿಗಳ ತಾಲೂಕವಾರು ಸಂಖ್ಯೆ : ಡಿಸಿಸಿ ಬ್ಯಾಂಕ ಚುನಾವಣಾ ಕಣದಲ್ಲಿ ಮದ್ಯಾಹ್ನ 3-00 ಘಂಟೆಗೆ ನಾಮಪತ್ರ ಸಲ್ಲಿಸುವ ಸಮಯ ಮುಗಿದ ನಂತರ 15 ಪಿ ಕೆ ಪಿ ಎಸ್ ಸಂಘಗಳಿಂದ ಹಾಗೂ ಒಂದು ಇತರೆ ಕ್ಷೇತ್ರ ಇದ್ದು ಅದರಲ್ಲಿ ಅಥಣಿ ತಾಲೂಕಿನಿಂದ 4 ಜನ, ಕಾಗವಾಡದಿಂದ 2 ಜನ, ನಿಪ್ಪಾಣಿ 2 ಜನ, ರಾಮದುರ್ಗ 3 ಜನ, ಖಾನಾಪುರ 3 ಜನ, ಬೈಲಹೊಂಗಲ 2 ಜನ, ರಾಯಭಾಗ 6 ಜನ, ಕಿತ್ತೂರು 3 ಜನ, ಹುಕ್ಕೇರಿ 3 ಜನ, ಮೂಡಲಗಿ 2 ಜನ ಅಭ್ಯರ್ಥಿಗಳು ಚುನಾವಣೆಯಲ್ಲಿ ಉಳಿದಿದ್ದರೆ, ನಾಮಪತ್ರ ಹಿಂಪಡೆಯಲು ಅ. 13 ಕೊನೆಯ ದಿನವಾಗಿದ್ದು ಅಂದು ಚುನಾವಣೆಯ ಸ್ಪಷ್ಟ ಚಿತ್ರಣ ತಿಳಿಯಲಿದೆ.
ಮೂಡಲಗಿ ತಾಲೂಕಿನಿಂದ ಸ್ಪರ್ಧೆ ಮಾಡಿರುವ ನೀಲಕಂಠ ಬಸವರಾಜ ಕಪ್ಪಲಗುದ್ದಿ ಆಯ್ಕೆ ಖಚಿತ.ಜಾರಕಿಹೊಳಿ ಸಹೋದರರ ಬಣದ ಅಭ್ಯರ್ಥಿ ಅಗಿದ್ದು ಅವರೊಂದಿಗೆ ಸ್ಪರ್ದಿಸಿದ್ದ ಇನ್ನೊರ್ವ ಅಭ್ಯರ್ಥಿ ನಾಳೆ ನಾಮಪತ್ರ ಹಿಂಪಡೆಯುತ್ತಿದ್ದು ಅವರ ಆಯ್ಕೆಯು ಖಚಿತವಾಗಿದೆ.
ಗೆಲುವಿಗೆ ಅಭಿಮಾನಿಗಳ ಸಂಭ್ರಮ : ಬೆಳಗಾವಿ ಡಿಸಿಸಿ ಬ್ಯಾಂಕ ಪ್ರಧಾನ ಕಚೇರಿಯಲ್ಲಿ ಶನಿವಾರದಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ಆಗಿದ್ದರಿಂದ 3 ಘಂಟೆಗೆ 5 ಅಭ್ಯರ್ಥಿಗಳಾದ ಶಾಸಕ ಗಣೇಶ ಹುಕ್ಕೇರಿ, ಶಾಸಕ ವಿಶ್ವಾಸ ವೈದ್ಯ, ಅಮರನಾಥ ಜಾರಕಿಹೊಳಿ, ರಾಹುಲ ಜಾರಕಿಹೊಳಿ, ನೀಲಕಂಠ ಕಪ್ಪಲಗುದ್ದಿ ಅಭಿಮಾನಿಗಳು ಇವರ ಅವಿರೋಧ ಆಯ್ಕೆ ಖಚಿತ ಆಗುತ್ತಿದ್ದಂತೆ ಗುಲಾಲು ಹಚ್ಚಿ, ಪಟ್ಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಶನಿವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ 6 ಜನ ಅಭ್ಯರ್ಥಿಗಳಾದ ಇತರೆ ಕ್ಷೇತ್ರದಿಂದ ಎಮ್ ಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಗೋಕಾಕ ತಾಲೂಕಿನಿಂದ ಅಮರನಾಥ ಜಾರಕಿಹೊಳಿ, ಬೆಳಗಾವಿ ತಾಲೂಕಿನಿಂದ ರಾಹುಲ ಜಾರಕಿಹೊಳಿ, ಮೂಡಲಗಿ ತಾಲೂಕಿನಿಂದ ನೀಲಕಂಠ ಕಪ್ಪಲಗುದ್ದಿ, ಹುಕ್ಕೇರಿ ತಾಲೂಕ ರಾಜೇಂದ್ರ ಪಾಟೀಲ, ರಾಮದುರ್ಗ ತಾಲೂಕ ವತಿಯಿಂದ ಎಸ್ ಎಸ್ ಡವನ ನಾಮಪತ್ರ ಸಲ್ಲಿಸಿದ್ದರು.