ರಂಗೇರಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಕೈ ಪಾಲಾಗುವುದೆ ಬಿಡಿಸಿಸಿ ಬ್ಯಾಂಕ್ 

Ravi Talawar
ರಂಗೇರಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಕೈ ಪಾಲಾಗುವುದೆ ಬಿಡಿಸಿಸಿ ಬ್ಯಾಂಕ್ 
oplus_0
WhatsApp Group Join Now
Telegram Group Join Now
ಯರಗಟ್ಟಿ: ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ ಮೂರು ತಿಂಗಳು ಇರುವಾಗಲೇ ಕಾವು ರಂಗೇರುತ್ತಿದ್ದು. ಶುಕ್ರವಾರ ಪಟ್ಟಣದ ರತ್ನ ಸಂಗಮ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಮತ್ತು ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಯರಗಟ್ಟಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಆಡಳಿತ ಮಂಡಳಿ ಸದಸ್ಯರ ಸೌಹಾರ್ದ ಸಭೆ ಜರುಗಿತು.
ಸಭೆಯಲ್ಲಿ ಬೆಳಗಾವಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಸ್ಥಾನದ ಚುನಾವಣೆಗೆ ಶಾಸಕ ವಿಶ್ವಾಸ ವೈದ್ಯ ಅವರನ್ನು ಸರ್ವಾನುಮತದಿಂದ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಶಾಸಕ ವಿಶ್ವಾಸ ವೈದ್ಯ ಕ್ಷೇತ್ರದಲ್ಲಿ ಅಧಿಕಾರಗಳನ್ನು ಮಾಡುತ್ತಿದ್ದಾರೆ ಆದ್ದರಿಂದ ಅವರನ್ನು ಮುಂಬರುವ  ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿದ್ದಾರೆ ಈಗಾಗಲೇ ನಮಗೆ ತಾಲೂಕಿನ 21 ಪಿಕೆಪಿಎಸ್ ನ ಆಡಳಿತ ಮಂಡಳಿಯವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು
ನಂತರ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಅವರು ರೇಣುಕಾ ಎಲ್ಲಮ್ಮನ ಹಾಗೂ ಶಾಸಕರು ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಶಾಸಕನಾಗಿದ್ದೇನೆ ಮುಂಬರುವ ಬಿಡಿಸಿಸಿ ಬ್ಯಾಂಕ್ ನ ಚುನಾವಣೆಯಲ್ಲಿ ನಿಮ್ಮ ಬೆಂಬಲ ನನಗಿರಲಿ ಎಂದು ವಿನಂತಿಸಿಕೊಂಡರು.
ಈ ವೇಳೆ ಸದಾಶಿವ ಕೌಜಲಗಿ, ಬೆಮುಲ್ ನಿರ್ದೇಶಕ  ಶಂಕರ ಇಟ್ನಾಳ, ರವಿಂದ್ರ ಯಲಿಗಾರ, ಛಾಯಪ್ಪಾ ಹುಂಡೆಕಾರ್, ಲಕ್ಷ್ಮಣ್ ಕುಂಟೀರಪ್ಪಗೊಳ, ಆರ್. ಕೆ ಪಟಾತ್, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ,  ಪ್ರಕಾಶ ವಾಲಿ, ಫಕ್ಕೀರಪ್ಪ ಹದ್ದನ್ನವರ, ಬಂಗಾರೆಪ್ಪ ಹರಳಿ, ಸಿ. ಬಿ. ಬಾಳಿ, ಡಿ. ಡಿ. ಟೋಪೋಜಿ, ಬಸು ಸತ್ತೂರಿ, ನಿಖಿಲ ಪಾಟೀಲ, ರಫೀಕ್ ಡಿಕೆ,  ಪ್ರವೀಣ ರಾಮಪ್ಪನವರ, ಶಿವು ರಾಥೋಡ, ಗೋಪಾಲ ದಳವಾಯಿ, ಸುರೇಶ ಭಜಂತ್ರಿ, ಪಡೆಪ್ಪ ನರಿ, ಯಲ್ಲಪ್ಪ ನರಿ, ಉಮೇಶ ಮಾಗುಂಡನವರ ಹಾಗೂ ಯರಗಟ್ಟಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮತೀತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article