ರನ್ನ ಬೆಳಗಲಿ: ಪಟ್ಟಣದ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೆರ್ಗಡೆಯಾದ ಬಸವರಾಜ ಜೈನಾಪುರ ೬೨೫ಕ್ಕೆ ೬೦೦ ಅಂಕಗಳಿಸಿ ಶೇ ೯೬% ಪಡೆದು ಪ್ರಥಮ, ವಿವೇಕಾನಂದ ಸುತಾರ ೬೨೫ ಕ್ಕೆ ೫೯೯ ಅಂಕಗಳಿಸಿ ಶೇ
೯೫.೮೪% ಪಡೆದು ದ್ವಿತೀಯ, ಮಲ್ಲಿಕಾರ್ಜುನ ಪೂಜಾರ ೬೨೫ಕ್ಕೆ ೫೯೬ ಅಂಕಗಳಿಸಿ ಶೇ ೯೫.೩೬% ಪಡೆದು ತೃತೀಯ ಸ್ಥಾನ ಪಡೆದಿದ್ದು ಅವರೊಂದಿಗೆ ರೂಪಾ ಸೈದಾಪುರ ೯೪.೮೮%, ಅರ್ಪಿತಾ ದಂಡಿನ ೯೪.೨೪%. ಪ್ರವೀಣ ಕಡಪಟ್ಟಿ ೯೩.೯೨% ಸಹನಾ ಬಡಿಗೇರ ೯೩.೪೪%, ಪ್ರಮೋದ ಸೂರಪ್ಪಗೋಳ ೯೨.೪೮%,ಪೂಜಾ ಅವರಾದಿ ೯೨% ಪ್ರವೀಣ ಬಡಿಗೇರ ೯೧.೮೪%, ಸಾವಿತ್ರಿ ಒಂಟಿಗೋಡಿ ೯೦.೭೨% ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಈ ವಿದ್ಯಾರ್ಥಿಗಳಿಗೆ, ಮುಖ್ಯೋಪಾದ್ಯರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ದುಂಡಪ್ಪ ಭರಮನಿ, ಚೇರಮನ್ನರಾದ ಎಸ್.ಆಯ್.ಒಂಟಗೋಡಿ, ಕಾರ್ಯದರ್ಶಿಗಳಾದ ಪಂಡಿತ ಪೂಜಾರ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿ ಗೌರವಿಸಿದ್ದಾರೆ.