ಸಾಯಿಬಾಬಾ ಜೋಳಿಗೆ ಭೀಕ್ಷಾ ಕಾರ್ಯಕ್ರಮ

Ravi Talawar
ಸಾಯಿಬಾಬಾ ಜೋಳಿಗೆ ಭೀಕ್ಷಾ ಕಾರ್ಯಕ್ರಮ
WhatsApp Group Join Now
Telegram Group Join Now

ಗದಗ, ಜು. ೧೪ : ಗದುಗಿನ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ (ರಿ) ಸಮಿತಿಯಿಂದ ಗುರುಪೂಣ ಮೆ ಅಂಗವಾಗಿ ರವಿವಾರ ಗದಗ ನಗರದ ವಿವಿದೆಡೆ ಶ್ರೀ ಸಾಯಿಬಾಬಾ ಅವರ ಜೋಳಿಗೆ ಭೀಕ್ಷಾ ಕಾರ್ಯಕ್ರಮ ಜರುಗಿತು

.
ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸತ್ಸಂಗ ಸಮಿತಿಯ ಪದಾಧಿಕಾರಿಗಳು, ಗುರುಹಿರಿಯರು ಬಾಬಾ ಅವರಲ್ಲಿ ವಿಶೇಷ ಪ್ರಾರ್ಥನೆ, ಸಂಕಲ್ಪ ಸಲ್ಲಿಸಿ ಜೋಳಿಗೆ ಭೀಕ್ಷಾ ಕೈಂಕರ್ಯಕ್ಕೆ ಮುಂದಾದರು.

ಮುಂಜಾನೆ ಶ್ರೀ ಸಾಯಿ ಮಂದಿರದಿಂದ ಪ್ರಾರಂಭಗೊಂಡ ಭೀಕ್ಷಾ ಕಾರ್ಯಕ್ರಮ ಗದುಗಿನ ವಿವೇಕಾನಂದ ಬಡಾವಣೆ, ಕರಿಯಮ್ಮಕಲ್ಲ ಬಡಾವಣೆ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾನ್ಹ ಶ್ರೀ ರಾಘವೇಂದ್ರ ಮಠದ ಮುಖಾಂತರ ಸಾಯಿ ಮಂದಿರವನ್ನು ತಲುಪಿತು.

ಶ್ರೀ ಸಾಯಿಬಾಬಾ ಭಕ್ತಾಧಿಗಳು ಸತ್ಸಂಗ ಭಕ್ತಾಧಿಗಳನ್ನು ಬರಮಾಡಿಕೊಂಡು ತಮ್ಮ ಸಂಕಲ್ಪ ಇಷ್ಠಾರ್ಥಗಳೊಂದಿಗೆ ಕಾಣ ಕೆ, ಪ್ರಸಾದಕ್ಕೆ ದವಸ ಧಾನ್ಯ ಪದಾರ್ಥಗಳನ್ನು ಜೋಳಿಗೆಗೆ ಸಮರ್ಪಿಸಿ ಸಂತೃಪ್ತರಾದರು.

ಗದಗ ಹಾತಲಗೇರಿ ರೋಡನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿ ದಿನ ಸಂಜೆ ೭ ರಿಂದ ೮ ಗಂಟೆಯವರೆಗೆ ಡಾ.ಎಸ್.ಬಿ.ಶೆಟ್ಟರ ಅವರಿಂದ ಆರಂಭಗೊಂಡಿರುವ ಶ್ರೀ ಸಾಯಿ ಸಚ್ಛರಿತ್ರೆ ಪ್ರವಚನ ಪ್ರವಚನ ಜುಲೈ ೨೦ ರವರೆಗೆ ಜರುಗುವದು.

ಜು. ೨೦ರವರೆಗೆ ಪ್ರತಿದಿನ ಮುಂಜಾನೆ ೧೦ ರಿಂದ ೧೨ ಗಂಟೆಯವರೆಗೆ ಧ್ಯಾನ ಮಂದಿರದಲ್ಲಿ ಸದ್ಭಕ್ತರಿಂದ ಶ್ರೀ ಸಾಯಿ ಸಚ್ಛರಿತ್ರೆ ಪಾರಾಯಣ ಜರುಗಲಿದೆ.
ಜು. ೨೧ ರಂದು ರವಿವಾರ ಗುರುಪೂಣ ಮೆ ಕಾರ್ಯಕ್ರಮ ನಡೆಯಲಿದ್ದು ಬೆಳಿಗ್ಗೆ ೬ ಗಂಟೆಗೆ ಕಾಕಡಾರತಿ, ೬-೩೦ ನಂತರ ಬಾಬಾ ಅವರಿಗೆ ಮಂಗಲ ಸ್ನಾನ, ರುದ್ರಾಭಿಷೇಕ, ಅಲಂಕಾರ ಪೂಜೆ. ಮಧ್ಯಾನ್ಹ ೧೨ ಗಂಟೆಗೆ ಪಂಚಾರತಿ ಹಾಗೂ ಸದ್ಭಕ್ತರಿಂದ ಪುಷ್ಪಾರ್ಚನೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫ ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸೂರ್ಯಾಸ್ತಕ್ಕೆ ಧೋಪಾರತಿ ನಂತರ ಪಲ್ಲಕ್ಕಿ ಉತ್ಸವ, ರಾತ್ರಿ ೧೦ ಗಂಟೆಗೆ ಶೇಜಾರತಿಯೊಂದಿಗೆ ಕಾರ್ಯಕ್ರಮ ಮಹಾಮಂಗಲಗೊಳ್ಳುವದು ಎಂದು ಗದಗ-ಬೆಟಗೇರಿಯ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ (ರಿ) ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

 

WhatsApp Group Join Now
Telegram Group Join Now
Share This Article